ನವದೆಹಲಿ : ಜಮ್ಮು-ಕಾಶೀರದ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿರುವ ಪಾಕ್ ಸೇನೆ, ತನ್ನ ಕೃತ್ಯ ಮುಂದುವರೆಸುವ ಮೂಲಕ ಭಾರತವನ್ನು ಇನ್ನಷ್ಟು ಕೆಣಕುವ ಯತ್ನ ನಡೆಸಿದೆ.
ಕಳೆದ 15ದಿನಗಳಲ್ಲಿ ಪಾಕಿಸ್ತಾನ 21ಬಾರಿ ಕದನ ವಿರಾಮ ಉಲ್ಲಂಘನೆಮಾಡಿದೆ. ಆಗಸ್ಟ್ ತಿಂಗಳೊಂದರಲ್ಲೇ 23ಬಾರಿ, ಜು.16ರಿಂದ ಈವರೆಗೆ ಒಟ್ಟು 33ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಈ ನಡುವೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಕ್ ಸೇನೆ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಪಾಕಿಸ್ತಾನದ ಜತಗಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. ಪಾಕ್ ಸೇನೆಯ ದಾಳಿ ತಡೆಯಲು ಇಷ್ಟು ಸಾಲದು ಎಂದು ಶಿವಸೇನೆ ಹೇಳಿದೆ.
ಪಾಕಿಸ್ತಾನ ಭೂಭಾಗಕ್ಕೆ ನಾವು ನುಗ್ಗಿ ಅವರಿಗೆಲ್ಲ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಮಿತ್ರಪಕ್ಷ ಶಿವಸೇನೆ ಸಾಮ್ನಾದಲ್ಲಿ ಅಭಿಪ್ರಾಯಪಟ್ಟಿದೆ.