Untitled Document
Sign Up | Login    
Dynamic website and Portals
  
September 15, 2014

ಹಣದುಬ್ಬರದಲ್ಲಿ ದಾಖಲೆಯ ಇಳಿಕೆ

ನವದೆಹಲಿ : 'ತರಕಾರಿಗಳ ಬೆಲೆ' ಇಳಿಕೆಯಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಹಣದುಬ್ಬರ ದರ ಶೇ.3.74ಕ್ಕೆ ಕುಸಿದಿದೆ. ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ ದರ ಇಳಿಕೆಯಾಗಿದೆ.

2009ರ ಅಕ್ಟೋಬರ್ ನಲ್ಲಿ ಹಣದುಬ್ಬರ ಪ್ರಮಾಣ ಶೇ.1.8ಕ್ಕೆ ಕುಸಿದಿತ್ತು. ಇದನ್ನು ಹೊರತುಪಡಿಸಿದರೆ ಕಳೆದ 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಹಣದುಬ್ಬರ ದರ ನಿಯಂತ್ರಣೆಕ್ಕೆ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.8.43 ರಿಂದ 5.15ಕ್ಕೆ ಕುಸಿದಿತ್ತು.

ಕಳೆದ 3 ತಿಂಗಳಿನಿಂದ ತರಕಾರಿಗಳ ಬೆಲೆ ನಿರಂತರವಾಗಿ ಕುಸಿಯುತ್ತಿರುವುದರ ಹಿನ್ನೆಲೆಯಲ್ಲಿ ಹಣದುಬ್ಬರ ದರ ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿತ್ತಾದರೂ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ(ರೀಟೇಲ್ ಹಣದುಬ್ಬರ) ಶೇ.7.96ರಿಂದ ಶೇ.7.8ಕ್ಕೆ ಇಳಿಕೆಯಾಗಿತ್ತು.

ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೂರು ತಿಂಗಳಲ್ಲಿ ಹಣದುಬ್ಬರ ದರ ಕ್ಷಿಪ್ರಗತಿಯಲ್ಲಿ ಇಳಿಕೆಯಾಗುತ್ತಿರುವುದು ಗಮನಾರ್ಹ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited