ನವದೆಹಲಿ : ಸುಪ್ರೀಂ ಕೋರ್ಟ್ ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್ ದತ್ತು ಅವರ ವಿರುದ್ಧ ಲೈಂಗಿಕ ಕಿರುಕಳ ನೀಡಿರುವ ಆರೋಪ ಕೇಳಿಬಂದಿದೆ.
ಹಿರಿಯ ವಕೀಲೆ ನಿಶಾ ಪ್ರಿಯಾ ಭಾಟಿಯಾ(51) ಹೆಚ್.ಎಲ್ ದತ್ತು ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ತಮಗೆ ಕಿರುಕುಳ ನೀಡಿರುವ ದತ್ತು ಅವರ ನೇಮಕಾತಿಯ ಶಿಫಾರಸನ್ನು ರದ್ದುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಗೆ ನಿಶಾ ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಜಿ ರೋಹಿಣಿ ಹಾಗೂ ಆರ್.ಎಸ್. ಎನ್ ಡ್ವಲಾ ಅವರ ವಿಭಾಗೀಯ ಪೀಠ, ದತ್ತು ಅವರ ವಿರುದ್ಧ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಪ್ರಕರಣದ ಸಂಬಂಧ ಸೆ.18ರಿಂದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇದೇ ವೇಳೆ ಸರ್ಕಾರಿ ವಕೀಲ ಸಂಜಯ್ ಜೈನ್ ಅವರು ನ್ಯಾ.ದತ್ತು ಪರ ವಕಾಲತ್ತು ವಹಿಸಿದ್ದು, ಸುಳ್ಳು ಆರೋಪವಿರುವುದರಿಂದ ಅರ್ಜಿಯನ್ನು ತಿರಸ್ಕರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಸರ್ಕಾರಿ ವಕೀಲರ ವಾದದ ಅಂಶಗಳನ್ನು ಪರಿಗಣಿಸದ ಕೋರ್ಟ್ ದತ್ತು ಅವರ ವಿರುದ್ಧ ವಿಚಾರಣೆ ನಡೆಸುವುದಾಗಿ ತಿಳಿಸಿದೆ.