Untitled Document
Sign Up | Login    
Dynamic website and Portals
  
September 18, 2014

ವೈದ್ಯಕೀಯ ದಂತ ವೈದ್ಯಕೀಯ ಸಿಇಟಿ: 3 ನೇ ಸುತ್ತಿನ ಸೀಟು ಹಂಚಿಕೆ

ಬೆಂಗಳೂರು : ಹಂಚಿಕೆಯಾಗದೇ ಉಳಿದಿರುವ 115 ವೈದ್ಯಕೀಯ ಮತ್ತು 12 ದಂತ ವೈದ್ಯಕೀಯ ಸಿಇಟಿ ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳು ರದ್ದುಪಡಿಸಿದ, ಕಾಲೇಜಿಗೆ ಪ್ರವೇಶ ಪಡೆಯದೇ ಉಳಿದಿರುವ 18 ವೈದ್ಯಕೀಯ ಮತ್ತು 230 ದಂತ ವೈದ್ಯಕೀಯ ಸೀಟು ಸೇರಿದಂತೆ ಒಟ್ಟು 133 ವೈದ್ಯಕೀಯ, 242 ದಂತ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಸುತ್ತಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಿಇಟಿ- 2014 ರಲ್ಲಿ ವೈದ್ಯಕೀಯ ರ್‍ಯಾಂಕ್ ಪಡೆದಿರುವ ಎಲ್ಲಾ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದಾದರೂ, ಈಗಾಗಲೇ ಯಾವುದೇ ಸುತ್ತಿನಲ್ಲಿ ವೈದ್ಯಕೀಯ/ದಂತ ವೈದ್ಯಕೀಯ ಸೀಟು ಹಂಚಿಕೆ ಪಡೆದು ನಿಗಧಿತ ಸಮಯದಲ್ಲಿ ಶುಲ್ಕ ಪಾವತಿ ಮಾಡದಿರುವವರು, ಸೀಟು ಹಂಚಿಕೆಯ ನಂತರ ಕಾಲೇಜಿಗೆ ಪ್ರವೇಶ ಪಡೆಯದೇ ಇರುವ ಅಭ್ಯರ್ಥಿಗಳು ಪುನಹ ಅದೇ ಕೋರ್ಸನ್ನು ಆಯ್ಕೆ ಮಾಡಲು ಅರ್ಹತೆ ಹೊಂದಿರುವುದಿಲ್ಲ.

ಸೀಟ್ ಮ್ಯಾಟ್ರಿಕ್ಸ್ ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟವಾಗಿದ್ದು ಅರ್ಹ ಅಭ್ಯರ್ಥಿಗಳು ಸೆ. 18 ರಂದು ಬೆಳಿಗ್ಗೆ 9 ಗಂಟೆಯಿಂದ ಸೆ. 19 ಶುಕ್ರವಾರ ಸಂಜೆ 5 ಗಂಟೆಯವರೆಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸೀಟು ಹಂಚಿಕೆ ಫಲಿತಾಂಶವನ್ನು ಸೆ. 20 ರ ಮಧ್ಯಾಹ್ನ 1 ಗಂಟೆಯ ನಂತರ ಪ್ರಕಟಿಸಲಾಗುತ್ತದೆ. ಸೆ 22 ರಿಂz ಆನ್ ಲೈನ್ ಮೂಲಕ ಚಲನ್ ಪಡೆದು ನಿಗಧಿತ ಶುಲ್ಕ ಪಾವತಿಸುವುದು, ಪ್ರವೇಶ ಅನುಮತಿ ಪತ್ರ ಡೌನ್ ಲೋಡ್ ಮಾಡಬಹುದಾಗಿದ್ದು, ಕಾಲೇಜಿಗೆ ಹೋಗಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟಂಬರ್ 26 ಕೊನೆಯ ದಿನವಾಗಿರುತ್ತದೆ.

(ಅ) ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದ ತಕ್ಷಣ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿದ್ದ ಸೀಟು ರದ್ದುಗೊಳ್ಳುತ್ತದೆ ಮತ್ತು ಯಾವುದೇ ಕಾರಣಕ್ಕೂ ಆ ಸೀಟುಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಈ ಸುತ್ತಿನಲ್ಲಿ ಹಂಚಿಕೆಯಾಗುವ ಕಾಲೇಜಿಗೆ ಕಡ್ಡಾಯವಾಗಿ ಪ್ರವೇಶವನ್ನು ಪಡೆಯಬೇಕು.

(ಆ) ಒಂದು ವೇಳೆ ಈ ಸುತ್ತಿನಲ್ಲಿ ಹಂಚಿಕೆಯಾಗುವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಇಚ್ಛಿಸದಿದ್ದಲ್ಲಿ ಅಂತಹ ಆಭ್ಯರ್ಥಿಗಳು ಶುಲ್ಕ ಹಿಂಪಡೆಯಲು ಅರ್ಹರಿರುವುದಿಲ್ಲ.

ಆದರೆ ಪ್ರವೇಶ ಪಡೆದಿರುವ ಕಾಲೇಜುಗಳಿಂದ ಮೂಲ ದಾಖಲೆಗಳನ್ನು ಪಡೆದು ಹೊಸದಾಗಿ ಹಂಚಿಕೆಯಾಗುವ ಕಾಲೇಜುಗಳಿಗೆ ನಿಗದಿತ ಸಮಯದಲ್ಲಿ ನೀಡಿ ಪ್ರವೇಶ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.

ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಯನಾನಿ, ನ್ಯಾಚುರೋಪತಿ ಮತ್ತು ಯೋಗ ಕೋರ್ಸುಗ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ದಿನಾಂಕ 19-09-2014 ಸಂಜೆ 5.00ರ ಒಳಗಾಗಿ ರದ್ದುಪಡಿಸಿಕೊಂಡಲ್ಲಿ ನಿಯಮಾನುಸಾರ ಶುಲ್ಕ ಮರುಪಾವತಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್-http://kea.kar.nic.in ನೋಡಬಹುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited