ಇಂಚಾನ್ : ದಕ್ಷಿಣ ಕೊರಿಯಾದ ರಾಜಧಾನಿ ಇಂಚಾನ್ ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ದೊರೆತಿದೆ.
ಭಾರತದ ಜೀತು ರಾಯ್ ಶೂಟಿಂಗ್ ನಲ್ಲಿ ಚಿನ್ನದ ಪದಕಗಳಿಸುವ ಮೂಲಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಂದೇ ದಾಖಲೆ ನಿರ್ಮಿಸಿದ್ದಾರೆ.
50 ಮೀಟರ್ ಏರ್ ಪಿಸ್ತೂಲ್ ನಲ್ಲಿ ಜೀತು ರಾಯ್ 186 ಪಾಯಿಂಟ್ ಗಳಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಆರಂಭದ ಸುತ್ತಿನಿಂದಲೂ ಜೀತು ರಾಯ್ ಅವರಿಗೆ ಚೀನಾದ ವೈ ಪಾಂಗ್ ಹಾಗೂ ವಿಯೆಟ್ನಾಂ ನ ಹೋಂಗ್ ನುಯೆನ್ ಪ್ರಬಲ ಸ್ಪರ್ಧೆಯೊಡ್ಡಿದ್ದರು. ಆದರೆ ಅಂತಿಮವಾಗಿ ಜೀತು ಫೈನಲ್ ನಲ್ಲಿ 186 ಪಾಯಿಂಟ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.