ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆ ಮಾಡಿರುವ ಮಂಗಳಯಾನ ನೌಕೆ (ಮಾಮ್) ಮಂಗಳನ ಅಂಗಳದಿಂದ 5 ಫೋಟೋಗಳನ್ನು ರವಾನಿಸಿದೆ.
ಇಸ್ರೋ ಉಡಾವಣೆ ಮಾಡಿರುವ ಮಾಮ್ ನೌಕೆ ಸೆ.24ರಂದು ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದ್ದು, ಮಂಗಳನ ಗ್ರಹದಿಂದ ಕಲರ್ ಫೋಟೊ ಗಳನ್ನು ರವಾನಿಸಿದೆ. ಈ 5 ಫೋಟೊಗಳು ಬೆಂಗಳೂರಿನ ಪೀಣ್ಯದಲ್ಲಿರುವ ಬ್ಯಾಲಾಳುವಿನ ಇಸ್ರೋ ಕೇಂದ್ರಕ್ಕೆ ತಲುಪಿವೆ. ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ.
ಐದು ಛಾಯಾಚಿತ್ರಗಳ ಗುಣಮಟ್ಟ ಉತ್ತಮವಾಗಿದ್ದು, ಮಂಗಳ ಗ್ರಹದ ಬಗ್ಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡಿವೆ ಮಾಮ್ ಉತ್ತಮವಾಗಿ ತನ್ನ ಕೆಲಸ ಆರಂಭಿಸುರುವುದು ಛಾಯಾಚಿತ್ರಗಳಿಂದ ಸ್ಪಷ್ಟವಾಗಿದೆ ಎಂದು ಇಸ್ರೋ ವಿಜ್ನಾನಿಗಳು ತಿಳಿಸಿದ್ದಾರೆ.