Untitled Document
Sign Up | Login    
Dynamic website and Portals
  
October 17, 2014

ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣ ನಿಷೇಧಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು : ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣಕ್ಕೆ ನಿಷೇಧ ಹೇರುವ ಬಗ್ಗೆ ರಾಜ್ಯ ಸರ್ಕಾರ, ಈ ತಿಂಗಳ ಕೊನೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ವಾಣಿಜ್ಯ ಚಿತ್ರಗಳ ಚಿತ್ರೀಕರಣದಿಂದ ಪಾರಂಪರಿಕ ತಾಣಾಗಳಿಗೆ ಹಾನಿಯುಂಟಾಗುತ್ತಿರುವ ಕಾರಣದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೇ ಚಿತ್ರೀಕರಣದಿಂದ ಪಾರಂಪರಿಕ ತಾಣಗಳಿಗೆ ಹಾನಿ ಉಂಟಾಗುತ್ತಿರುವ ಬಗ್ಗೆ ಪ್ರವಾಸಿ ತಾಣದ ಅಧಿಕಾರಿಗಳು ಸರ್ಕಾರಕ್ಕೆ ದೂರು ನೀಡಿರುವುದೂ ಈ ಆದೇಶ ಹೊರಡಿಸಲು ಕಾರಣ ಎಂದು ಹೇಳಲಾಗಿದೆ.

ವಾಣಿಜ್ಯ ಚಿತ್ರಗಳ ಬದಲು, ಪ್ರವಾಸಿ ತಾಣಗಳಿಗೆ ಉತ್ತೇಜನ ನೀಡುವ ಚಿತ್ರಗಳಿಗೆ ಚಿತ್ರೀಕರಣ ನಡೆಸಲು ಅವಕಾಶ ನೀಡುವ ಸಾಧ್ಯತೆಗಳಿದೆ.

ಈ ಹಿಂದೆಯೂ ರಾಜ್ಯ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಇಂತಹದ್ದೇ ಪ್ರಸ್ತಾವನೆ ಮುಂಡಿಟ್ಟಿದ್ದರು. ಆದರೆ ಚಿತ್ರರಂಗದಿಂದ ಸರ್ಕಾರದ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Entertainment

  • ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ
  • ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ.
  • ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ
  • 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited