ನವದೆಹಲಿ : ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮಹತ್ವದ ಆರ್ಥಿಕ ಸುಧಾರಣಾ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ,ಪೆಟ್ರೋಲ್ ರೀತಿ ಡೀಸೆಲ್ ಬೆಲೆಯನ್ನೂ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದೆ.
ಇದರ ಮೊದಲ ಹಂತವಾಗಿ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಡೀಸೆಲ್ ದರ 3.37 ರೂ ನಷ್ಟು ಇಳಿಕೆ ಕಂಡಿದೆ. ತೆರಿಗೆ ಒಳಗೊಂಡಂತೆ ಕರ್ನಾಟಕದಲ್ಲಿ ಸುಮಾರು 4 ರೂ. ನಷ್ಟು ಇಳಿಕೆಯಾಗಲಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಡೀಸೆಲ್ ದರ ಕಡಿಮೆಯಾಗುತ್ತಿದ್ದು, ಇದೇ ಮೊದಲು 2009 ಜ.29ರಂದು ಕಟ್ಟಕಡೇಯದಾಗಿ ಡೀಸೆಲ್ ಬೆಲೆ 2 ರೂ ಕಡಿತಗೊಳಿಸಲಾಗಿತ್ತು.