Untitled Document
Sign Up | Login    
Dynamic website and Portals
  
October 20, 2014

2012-13 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ

BW News Bureau : ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಜಿಲ್ಲೆಗೆ ಇಬ್ಬರಂತೆ ಒಟ್ಟು 30 ಜಿಲ್ಲೆಗಳಿಂದ 60 ಮಂದಿ ಕಲಾವಿದರನ್ನು ಹಾಗೂ 4 ಮಂದಿ ವಿದ್ವಾಂಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ತಲಾ 5000/-ರೂ, ಪ್ರಶಸ್ತಿ ಪತ್ರ, ಫಲಕಗಳೊಂದಿಗೆ ಗೌರವಿಸಲಾಗುವುದು. ಜಾನಪದ ವಿದ್ವಾಂಸರುಗಳಿಗೆ ತಲಾ 10000/-ರೂ, ಪ್ರಶಸ್ತಿ ಪತ್ರ ಫಲಕಗಳೊಂದಿಗೆ ಪುರಸ್ಕರಿಸಲಾಗುವುದು ಎಂದು ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.

2012 ರ ತಜ್ಞ ಪ್ರಶಸ್ತಿಗಳು:

1.ಡಾ.ಜೀಶಂಪ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ
ಡಾ. ಸೈಯದ್ ಝಮೀರುಲ್ಲಾ ಷರೀಫ್, ಉತ್ತರ ಕನ್ನಡ ಜಿಲ್ಲೆ

2.ಡಾ.ಬಿ.ಎಸ್.ಗದ್ದಗಿಮಠ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ ದೇಶಾಂಶ ಹುಡಗಿ, ಬೀದರ್ ಜಿಲ್ಲೆ

2012 ರ ಗೌರವ ಪ್ರಶಸ್ತಿಗಳು:

01. ಅರ್ಜುನ ಮರಾಠ ಹೆಗ್ಗಿನಾಳ ಗ್ರಾಮ, ಸೊನ್ನ ಅಂಚೆ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಮೊಹರಂ ಪದ ಗುಲ್ಬರ್ಗಾ

02. ಬಸಪ್ಪ ಕಲ್ಲಪ್ಪ ಗುಡಿಗೇರ ಸುಳ್ಳ ಗ್ರಾಮ, ಹುಬ್ಬಳ್ಳಿ ತಾಲ್ಲೂಕು ಧಾರವಾಡ ಜಿಲ್ಲೆ, ಜಗ್ಗಲಿಗೆ ವಾದನ ಧಾರವಾಡ

03. ಮರಿಗೌಡ ರಾಯನ ಹುಂಡಿ ಗ್ರಾಮ, ವರುಣಾ ಹೋಬಳಿ, ಅಯರಳ್ಳಿ ಅಂಚೆ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ. ಕಂಸಾಳೆ ಕುಣಿತ ಮೈಸೂರು

04. ಶಂಕರಪ್ಪಾ ನರಸಪ್ಪಾ ನಾಗೂರೆ ನಿಂಬೂರ ಗ್ರಾಮ, ಹುಮನಾಬಾದ್ ತಾಲ್ಲೂಕು, ಬೀದರ್ ಜಿಲ್ಲೆ. ಜನಪದ ವೈದ್ಯ ಬೀದರ

05. ಗಂಗಪ್ಪ ಮ. ಸತಬಣ್ಣವರ ಮಂಗೇನ ಕೊಪ್ಪ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ. ಜಗ್ಗಲಿಗೆ ವಾದನ ಬೆಳಗಾವಿ

06. ಯಲ್ಲಪ್ಪ ಹುಸೇನಪ್ಪ ಡಕ್ಕಣ್ಣವರ ರಾಮನಗರ ಕಳಸಾಪುರ ರಸ್ತೆ , ಗದಗ-582103 (ಗದಗ ಜಿಲ್ಲೆ) ಸುಡುಗಾಡು ಸಿದ್ದರು ಗದಗ

07. ರಾಮಪ್ಪ ಸಿದ್ದಪ್ಪ ಖೋತ ರನ್ನ ಬೆಳಗಲಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ರಿವಾಯಿತ್ ಪದ ಬಾಗಲಕೋಟೆ

08. ಬಾಬು ಗಿಡ್ಡ ಸಿದ್ಧಿ ತಂದೆ ಗಿಡ್ಡ ಪುಟ್ಟಸಿದ್ಧಿ ಹುಟುಕಮನೆ, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಬುಡಕಟ್ಟು ವೈದ್ಯ ಉತ್ತರ ಕನ್ನಡ ಜಿಲ್ಲೆ

09. ಆರ್.ಬಸಪ್ಪ ಗುಡಿಬೀದಿ – ಲಿಂಗದಹಳ್ಳಿ-577129 ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ವೀರಗಾಸೆ ಚಿಕ್ಕಮಗಳೂರು

10. ಕೈವಾರ ರಾಮಣ್ಣ ಬಲಜಿಗರಪೇಟೆ – ಕೈವಾರ ಗ್ರಾಮ-563128 ಚಿಂತಾಮಣಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ತತ್ವಪದ ಗಾಯನ ಚಿಕ್ಕಬಳ್ಳಾಪುರ

11.ವಿ. ತಿಮ್ಮಪ್ಪ ಮಾರ್ಜೇನಹಳ್ಳಿ, ಕಾಮದೇನಹಳ್ಳಿ ಅಂಚೆ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ. ತತ್ವಪದ ಕೋಲಾರ

12. ವಾಲ್ಮೀಕಪ್ಪ ಯಕ್ಕರನಾಳ ಪುಣ್ಯಕೋಟಿ ಸಂಸ್ಥೆ, ಕುಷ್ಟಗಿ ತಾಲ್ಲೂಕು ಕೊಪ್ಪಳ ಜಿಲ್ಲೆ ಲಾವಣಿ ಪದ ಕೊಪ್ಪಳ

13. ಮೋನಪ್ಪ ದುಂಡಪ್ಪ ಬನಸಿ ಕಾಖಂಡಕಿ ಗ್ರಾಮ, ಬಿಜಾಪುರ ತಾಲ್ಲೂಕು ಮತ್ತು ಜಿಲ್ಲೆ ಕರಡಿ ಮಜಲು ಬಿಜಾಪುರ

14. ಕೊರಗ ಪಾಣಾರ ಹರಿಕಂಡಿಗೆ – ಶಿರೂರು, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಭೂತರಾಧನೆ ಉಡುಪಿ

15. ಕಾಂತರ ತಾರಿಗುಡ್ಡೆ – ಬೊಂಡಂತಿಲ ಗ್ರಾಮ, ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ. ಜಾನಪದ ವೈದ್ಯ ದಕ್ಷಿಣ ಕನ್ನಡ

16. ಗೌರವ್ವ ಕ್ಯಾಲಕೊಂಡ ಅಂಚೆ, ಶಿಗ್ಗಾಂವಿ ತಾಲ್ಲೂಕು, ಹಾವೇರಿ ಜಿಲ್ಲೆ. ಸೋಬಾನೆಪದ ಹಾವೇರಿ

17. ನಾಗಮ್ಮ ದೊಡ್ಡಬೆಟ್ಟಕೇರಿ ಗುಡ್ಡೆಹೊಸೂರು ಅಂಚೆ, ಕುಶಾಲನಗರ ಹೋಬಳಿ, ಸೋಮವಾರ ಪೇಟೆ ತಾಲ್ಲೂಕು. ಕೊಡಗು ಜಿಲ್ಲೆ ಸೋಲಿಗರ ಗೀತೆಗಳು ಕೊಡಗು

18. ಚಿಕ್ಕ ಅಲುಗಮ್ಮ ಇರುಳಿಗರ ಕಾಲೋನಿ, ವೆಂಕಟರಾಯನದೊಡ್ಡಿ ಅಂಚೆ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ ಸಂಪ್ರದಾಯದ ಪದ ರಾಮನಗರ

19. ಮದ್ದೂರಮ್ಮ ಕೋಳೂರು ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಥನ ಗೀತೆ ಬೆಂಗಳೂರು ಗ್ರಾಮಾಂತರ

20. ಶಾಂತಮ್ಮ ಹುಲ್ಲೂರು ಗ್ರಾಮ, ಹಿರೆಗುಂಟನೂರು ಹೋಬಳಿ, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ ಮಹಿಳಾ ತಮಟೆ ವಾದನ ಚಿತ್ರದುರ್ಗ

21. ಚಿಕ್ಕರಾಮಕ್ಕ ಬ್ರಹ್ಮ ಸಂದ್ರ ಕೋರ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ತಂಬೂರಿ ಪದ ತುಮಕೂರು

22. ಕತ್ತಿಗೆ ಬಸಮ್ಮ ಕತ್ತಿಗೆ ಗ್ರಾಮ, ಹೊನ್ನಾಳಿ ತಾಲ್ಲೂಕು ದಾವಣಗೆರೆ ಜಿಲ್ಲೆ ಸಂಪ್ರದಾಯದ ಪದ ದಾವಣಗೆರೆ

23. ತಿಮ್ಮಮ್ಮ ಮುದುಗೆರೆ ಗ್ರಾಮ, ಅಟ್ಟವರ ಅಂಚೆ, ಹಾಸನ ತಾಲ್ಲೂಕು ಮತ್ತು ಜಿಲ್ಲೆ ತತ್ವಪದ ಹಾಸನ

24. ಪಾರ್ವತಮ್ಮ ಯಡ್ಡರಾಮನಹಳ್ಳಿ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ನಾಟಿ ವೈದ್ಯೆ ಬಳ್ಳಾರಿ

25. ಹುಚ್ಚಮ್ಮ ಎಲೆಕೊಪ್ಪ, ಬೆಳ್ಳೂರು ಹೋಬಳಿ ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆ ಸೋಬಾನೆ ಪದ ಮಂಡ್ಯ

26. ಮಹಾಲಕ್ಷ್ಮಮ್ಮ ಗಾಂಧಿನಗರ-ಸಾಗರ ಶಿವಮೊಗ್ಗ ಜಿಲ್ಲೆ ಜಾನಪದ ಗಾಯನ ಶಿವಮೊಗ್ಗ

27. ಆರ್. ಶಿವಕುಮಾರಿ ಮನೆ ನಂ 05-08-20 ನೇತಾಜಿನಗರ, ರಾಯಚೂರು ಸಂಪ್ರದಾಯ ಪದ ರಾಯಚೂರು

28. ಲಕ್ಷ್ಮೀಬಾಯಿ ರೇವಲ್ ಬುಡುಗಜಂಗಮ ಆಶ್ರಯ ಕಾಲೋನಿ ಬಸ್ ಡಿಪೋ ಹಿಂದುಗಡೆ, ಶಹಾಪೂರ(ತಾಲ್ಲೂಕು) ಯಾದಗಿರಿ ಜಿಲ್ಲೆ ಬುರ್ರಕಥೆ ಯಾದಗಿರಿ

29. ಲಕ್ಷ್ಮಮ್ಮ ಯರಿಯೂರು ಗ್ರಾಮ, ಯಳಂದೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ ನಾಟಿ ಪದ ಚಾಮರಾಜನಗರ

30. ಸಿದ್ದಮ್ಮ ಹಚ್ಚೆಕಲೆ ಬೆಂಗಳೂರು ನಗರ ಗಂಡ ಹೊನ್ನಯ್ಯ ನಂ81. 8ನೇ ಅಡ್ಡರಸ್ತೆ ಶಕ್ತಿ ಗಣಪತಿ ನಗರ ಕಮಲಾನಗರ ಬೆಂಗಳೂರು-79

2013ನೇ ಸಾಲಿನ ತಜ್ಞರ ಆಯ್ಕೆ:

ಡಾ.ಜೀಶಂಪ ಹೆಸರಿನಲ್ಲಿ ನೀಡುವ ಪ್ರಶಸ್ತಿಗಾಗಿ
ಡಾ .ಸುಶೀಲಾ ಹೊನ್ನೇಗೌಡ, ಬೆಂಗಳೂರು
ಡಾ.ಬಿ.ಎಸ್.ಗದ್ದಗಿಮಠ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಾಗಿ
ಡಾ.ಸಿದ್ದಣ್ಣ. ಎಫ್. ಜಕಬಾಳ, ಗದಗ ಜಿಲ್ಲೆ

2013 ರ ಗೌರವ ಪ್ರಶಸ್ತಿಗಳು:

01. ಗಂಗಮ್ಮ ತಾಯತ ಮೋಮಿನ್‌ಪುರ- ಮೈಲಾರಗಲ್ಲಿ ಸೇಡಂ, ಗುಲಬರ್ಗಾ

02. ನಾಗುಬಾಯಿ ಕೇರಾಫ್ ಶರಬಡಗಿ, ಬಸವ ಕಾಲೋನಿ, ನಂದಗೋಕುಲ, ಹುಬ್ಬಳ್ಳಿ-30 ಧಾರವಾಡ ಜಿಲ್ಲೆ ಸಂಪ್ರದಾಯ ಪದ ಧಾರವಾಡ

03. ಚಿಕ್ಕತಾಯಮ್ಮ ತಂದೆ ಒಡ್ಸಾಲಯ್ಯ ಮಾದಿಗಳ್ಳಿ, ಬನ್ನೂರು ಹೋಬಳಿ ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಸೋಬಾನೆ ಪದ ಮೈಸೂರು

04. ತಾನಮ್ಮ ಗಂಡ ಕಲ್ಲಪ್ಪ ಹಿರೇಭಾವಿ ತಳಮಡಗಿ, ಹುಮನಾಬಾದ್ ತಾಲ್ಲೂಕು, ಬೀದರ್ ಜಿಲ್ಲೆ ಕಥನ ಕಾವ್ಯ ಬೀದರ್

05. ಬೌರವ್ವ ಕಾಂಬಳೆ ಕೊಟ್ಟಲಗಿ ಗ್ರಾಮ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ. ಗೀಗೀ ಪದ ಬೆಳಗಾವಿ

06. ವಿರೂಪಾಕ್ಷಪ್ಪ ಗೂರನವರ ಕುರ್ತಕೋಟಿ, ಗದಗ ಜಿಲ್ಲೆ, ಕೋಲಾಟ ಗದಗ

07. ರುಕ್ಮವ್ವ ಬರಗಾಲ ನಾವಲಗಿ ಗ್ರಾಮ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಚೌಡಿಕೆ ಪದ ಬಾಗಲಕೋಟೆ

08. ಲಕ್ಷ್ಮೀ ಬುದ್ದುಗೌಡ ಮೂಲೆಮನೆ ಗ್ರಾಮ, ಬೆಳ್ಳಂಬರ ಅಂಚೆ, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ತಾರ್ಲೆ ಪದ ಉತ್ತರ ಕನ್ನಡ ಜಿಲ್ಲೆ

09. ಶ್ರೀಮತಿ ತಾಯಮ್ಮ ಎಕೆ ಕಾಲೋನಿ, ಸೊಲ್ಲಾಪುರ ಅಂಚೆ-577550 ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಸೋಬಾನೆ ಪದ ಚಿಕ್ಕಮಗಳೂರು

10. ಈರಮ್ಮ ಗಂಡ ಬೆಟ್ಟಪ್ಪ ದೇವರ ಮಳ್ಳೂರು ಅಂಚೆ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ತತ್ವಪದ ಚಿಕ್ಕಬಳ್ಳಾಪುರ

11. ಮೇಲೂರಮ್ಮ ಕಶೆಟ್ಟಿಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ಕಥನ ಕಾವ್ಯ ಕೋಲಾರ

12. ಪಾರವ್ವ ಲಚ್ಚಪ್ಪ ಲಮಾಣೆ ಅಧ್ಯಕ್ಷರು ಸೇವಾ ಲಾಲ್ ಮಹಿಳಾ ಜಾನಪದ ನೃತ್ಯ ಕಲಾ ಸಂಘ, ಇಟಗಿ ಗ್ರಾಮ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಲಂಬಾಣಿ ನೃತ್ಯ ಕೊಪ್ಪಳ

13. ಲಕ್ಷ್ಮೀಬಾಯಿ ಮಾದರ ಮನಗೂಳಿ ಗ್ರಾಮ ಬಸವನಬಾಗೇವಾಡಿ ತಾಲ್ಲೂಕು, ಬಿಜಾಪುರ ಜಿಲ್ಲೆ. ಚೌಡಿಕೆ ಪದ ಬಿಜಾಪುರ

14. ಸುಂದರಿ ದಿ. ಕುಟ್ಟಿ ಪಾಣಾರ ಓಂತಿಬೆಟ್ಟು – ಹಿರಿಯಡ್ಕ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಪಾಡ್ದನ ಉಡುಪಿ

15. ಸಿಂಧು ಗುಜರನ್ ಮೈಲೊಟ್ಟು – ಅತಿಕಾರಿ ಬೆಟ್ಟು ಮುಲ್ಕಿ ಅಂಚೆ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ಭೂತಾರಾಧನೆ ದಕ್ಷಿಣ ಕನ್ನಡ

16. ಹೊಳೆಲಿಂಗಪ್ಪ ಬಸಪ್ಪ ಚೌವ್ಹಾಣ ಜೋಗಿ ಓಣೆ – ತಿಳವಳ್ಳಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಕಿನ್ನರಿಜೋಗಿ ಪದ ಹಾವೇರಿ

17. ಪಿ.ಸಿ. ಚಾತ ಕೇರಾಫ್ ಪಿ.ಕೆ. ಗಿರೀಶ್ ಕಾನೂರು-571216 ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ. ಬುಡಕಟ್ಟು ಕಥನ ಕಾವ್ಯ ಕೊಡಗು

18. ರಾಮ ಸಂಜೀವಯ್ಯ ಹನುಮಂತೆಗೌಡನದೊಡ್ಡಿ ಹರಿಸಂದ್ರ ಅಂಚೆ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಪಟಾಕುಣಿತ ರಾಮನಗರ

19. ಎಸ್. ಯೋಗಲಿಂಗಂ ನಂ 5/2, 4ನೇ ಅಡ್ಡರಸ್ತೆ, ಪ್ರೇಮ್ ನಿವಾಸ್ ರಸ್ತೆ, ಕಮ್ಮನಹಳ್ಳಿ, ಬೆಂಗಳೂರು-560084. ಕೀಲುಕುದುರೆ ಬೆಂಗಳೂರು ನಗರ

20. ಟಿ.ನಾಗರಾಜಪ್ಪ ಕೊರಟಿ ಗ್ರಾಮ, ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕರಡಿ ಮಜಲು ಬೆಂಗಳೂರು ಗ್ರಾಮಾಂತರ

21. ಚಂದ್ರಪ್ಪ ಸೂಜಿಕಲ್ಲು – ಕೆಂಚಮ್ಮನಗುಡಿ, ಶ್ರೀರಾಂಪುರ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. ಉರುಮೆ ವಾದನ ಚಿತ್ರದುರ್ಗ

22. ಚಿಕ್ಕಕರಿಯಪ್ಪ ಬಡಮಂಗನಹಟ್ಟಿ – ಚಂಗವರ ಮಜರೆ, ಗೌಡಗೆರೆ ಹೋಬಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ. ಗಣೆವಾದನ ತುಮಕೂರು

23. ನಾಗ ಬೈರಪ್ಪ ಎನ್ ಬೆರಡವಳ್ಳಿ, ಚೆನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ ಜೋಗಿ ಪದ ದಾವಣಗೆರೆ

24. ವೆಂಕಟರಾಮು ಕಬ್ಬಳಿ, ಹಳೆಕೊಪ್ಪಲು ಅಂಚೆ ದುದ್ದ ಹೋಬಳಿ, ಹಾಸನ ತಾಲ್ಲೂಕು ಮತ್ತು ಜಿಲ್ಲೆ ಚಿಟ್ಟಿ ಮೇಳ ಹಾಸನ

25. ವೈ.ಮಲ್ಲಿಕಾರ್ಜುನಪ್ಪ ತಂದೆ ಹನುಮಂತಪ್ಪ ನವಗ್ರಾಮ ಬುಡ್ಗ್ಲ ಜಂಗಮ ಕಾಲೋನಿ, ಹಳೇದರೋಜಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ ಹಗಲುವೇಷಗಾರರು ಬಳ್ಳಾರಿ

26. ಚಂದ್ರಶೇಖರಾರಾಧ್ಯ ತಂದೆ ಸಿದ್ದಲಿಂಗರಾರಾಧ್ಯ ಗುಡುಗೆನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಹಸೆ ಜಗಲಿ ಮಂಡ್ಯ

27. ಗುಡ್ಡಪ್ಪ ಜೋಗಿ ಹೊಸೂರು ಅಂಚೆ – 577412 ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಿನ್ನರಿ ಜೋಗಿ ಪದ ಶಿವಮೊಗ್ಗ

28. ಹೆಚ್. ಶರಣಪ್ಪ ದಿನ್ನಿ ತಂದೆ ರಾಮಲಿಂಗಪ್ಪ ಕುಂಬಾರಓಣಿ, ನಾಲಾ ರೋಡ್, ಮಾನವಿ ತಾಲ್ಲೂಕು ರಾಯಚೂರು ಜಿಲ್ಲೆ ತತ್ವಪದರಾಯಚೂರು

29. ಶಾಂತಗೌಡ ಶರಣಗೌಡ ಮಾಲಿ ಪಾಟೀಲ ಕರಡಕಲ್ಲು ಅಂಚೆ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ. ತತ್ವಪದ ಯಾದಗಿರಿ

30. ದೊಡ್ಡಗವಿಬಸಪ್ಪ ದೊಡ್ಡಮೊಳೆ ಗ್ರಾಮ ಚಾಮರಾಜನಗರ ತಾ. ಮತ್ತು ಜಿಲ್ಲೆ ನೀಲಗಾರರ ಪದ ಚಾಮರಾಜನಗರ

ಜಾನಪದ ಕಲಾವಿದರಿಗೆ ಪ್ರಸ್ತುತ ನೀಡುತ್ತಿರುವ 5,000/- ರೂ. ಪ್ರಶಸ್ತಿಯನ್ನು 10,000/- ರೂ.ಗಳಿಗೆ ಹೆಚ್ಚಿಸುವಂತೆ, ಕಲಾವಿದರಿಗೆ ಆರೋಗ್ಯ ವಿಮೆ, ಗುರುತಿನ ಚೀಟಿ, ತಮ್ಮ ವಾಸಸ್ಥಳದ ಹತ್ತಿರ ನಿವೇಶನವನ್ನು ಸಹ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited