ಮುಂಬೈ : 'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, 400 ಅಂಕಗಳ ಏರಿಕೆಯೊಂದಿಗೇ ಷೇರುಪೇಟೆ ವಹಿವಾಟು ಆರಂಭವಾಗಿದೆ.
ಅ.20ರಂದು ಪ್ರಾರಂಭವಾದ ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಶೇ.1.37ರಷ್ಟು ಏರಿಕೆಯಾಗಿದ್ದರೆ, ನಿಫ್ಟಿ ಸೂಚ್ಯಂಕದಲ್ಲಿ ಶೇ.1.44ರಷ್ಟು ಏರಿಕೆಯಾಗಿದೆ.
ಹರ್ಯಾಣದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತು ಇದೇ ಪ್ರಥಮ ಬಾರಿಗೆ ಸರ್ಕಾರ ರಚಿಸಲಿದೆ. ಮಹಾರಾಷ್ಟ್ರದಲ್ಲೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಷೇರುಮಾರುಕಟ್ಟೆ ಪ್ರಾರಂಭದ ವಹಿವಾಟಿನಲ್ಲೇ ಸೆನ್ಸೆಕ್ಸ್ ಅಂಕ ಏರಿಕೆ ಕಂಡಿದೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ಡಿಸೇಲ್ ದರ ಇಳಿಕೆ ಸೇರಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳೂ ಸಹ ಷೇರುಪೇಟೆ ಸೂಚ್ಯಂಕ ಏರಿಕೆಯಾಗಲು ಕಾರಣವಾಗಿದೆ.