ಸಿಯಾಚಿನ್ : ದೇಶದ ರಕ್ಷಣೆಗಾಗಿ ಸೈನಿಕರು ಹಗಲಿರುಳು ಶ್ರಮಿಸುತ್ತಾರೆ. ಸೈನಿಕರ ಆತ್ಮವಿಶ್ವಾಸಕ್ಕೆ ನಮಸ್ಕರಿಸುತ್ತೇನೆ. ದೇಶದ 125 ಕೋಟಿ ಜನರು ನಿಮ್ಮೊಂದಿಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.
ಸಿಯಾಚಿನ್ ಗೆ ಭೆಟಿ ನೀಡಿದ ಪ್ರಧಾನಿ ಮೋದಿ ಮಿಲಿಟರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು ಯೋಧರಿಗೆ ದೀಪಾವಳಿ ಶುಭಾಷಯ ಕೋರಿದರು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ ಎಂದರು. ಭೂಸೇನೆ, ವಾಯುಸೇನೆ, ನೌಕಾಸೇನೆಯಿಂದ ಭಾರತಕ್ಕೆ ಗೌರವ ಬಂದಿದೆ. ಇಡೀ ವಿಶ್ವವೇ ಈಗ ಭಾರತದತ್ತ ತುರುಗಿ ನೋಡುವಂತಾಗಿದೆ ಎಂದರು.
ಗಡಿಯಲ್ಲಿ ಸೈನಿಕರು ಹಗಲಿರುಳುನ್ನೆದೇ ದುಡಿಯುತ್ತಾರೆ. ಅವರ ಆತ್ಮವಿಶ್ವಾಸಕ್ಕೆ ನನ್ನ ನಮಸ್ಕಾರ ಎಂದ ಮೋದಿ, ದೇಶದ ಜನತೆ ನಿಮ್ಮೊಂದಿಗಿದ್ದಾರೆ ಎಂದು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದರು. ಇದೇವೇಳೆ ಜಮ್ಮು-ಕಾಶ್ಮೀರದ ಪ್ರವಾಹದ ವೇಳೆ ಸಂತ್ರಸ್ಥರ ನೆರವಿಗೆ ಧಾವಿಸಿದ ಯೋಧರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.