Untitled Document
Sign Up | Login    
Dynamic website and Portals
  
October 31, 2014

ಮಹಾರಾಷ್ಟ್ರದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪದಗ್ರಹಣ

ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಮುಂಬೈ : 'ಮಹಾರಾಷ್ಟ್ರ'ದ 27ನೇ ಹಾಗೂ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ದೇವೇಂದ್ರ ಗಂಗಾಧರ್ ರಾವ್ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅ.31ರಂದು ಮುಂಬೈನ ಪ್ರಸಿದ್ಧ ವಾಂಖೆಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಫಡ್ನವೀಸ್ ಅವರೊಂದಿಗೆ ಏಕನಾಥ್ ಖಡ್ಸೆ, ಸುಧೀರ್ ಮನಗಂಟಿವಾರ್, ವಿನೋಧ್ ಶ್ರೀಧರ್ ತಾವ್ಡೇ, ಪ್ರಕಾಶ್ ಮಂಚೂಭಾಯ್ ಮೆಹ್ತಾ, ಪಂಕಜಾ ಗೋಪಿನಾಥ್ ಮುಂಡೆ ಸೇರಿದಂತೆ 6 ಸಂಪುಟ ದರ್ಜೆಯ ಸಚಿವರು,4 ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ, ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೆ, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು.

ದೇವೇಂದ್ರ ಫಡ್ನವೀಸ್ ಪದಗ್ರಹಣ ಸಮಾರಂಭಕ್ಕೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ಗೈರು ಹಾಜರಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೊನೆಘಳಿಗೆಲ್ಲಿ ದೂರವಾಣಿ ಮೂಲಕ ನೀಡಿದ ಆಹ್ವಾನವನ್ನು ಸ್ವೀಕರಿಸಿದ ಠಾಕ್ರೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ದೇವೇಂದ್ರ ಗಂಗಾಧರ್ ರಾವ್ ಫಡ್ನವೀಸ್ ಹಿನ್ನೆಲೆ:

44ರ ಹರೆಯದ ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಆರೆಸ್ಸೆಸ್ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ‌್ಯಕರ್ತ.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ರಾಜಕೀಯ ಪ್ರವೇಶಿಸಿ 27ನೆ ವರ್ಷಕ್ಕೇ ನಾಗ್ಪುರದ ಮೇಯರ್ ಆಗಿ ಈಗ ಮಹಾರಾಷ್ಟ್ರದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ಅವಿರತ ಪರಿಶ್ರಮ, ಸಂಘಟನಾ ಸಾಮರ್ಥ್ಯ, ರಾಜಕೀಯ ಬದ್ಧತೆ, ಶುದ್ಧ ನಡೆ ಹಾಗೂ ಅಭಿವೃದ್ಧಿಯ ದೂರದೃಷ್ಟಿ ಅವರನ್ನು ಮುಖ್ಯಮಂತ್ರಿ ಪದವಿಗೇರುವಂತೆ ಮಾಡಿವೆ.

ಎನ್‌.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಅವರು 37ನೇ ವಯಸ್ಸಿಗೇ ಸಿಎಂ ಹುದ್ದೆ ಅಲಂಕರಿಸಿದ ನಂತರ ರಾಜ್ಯದಲ್ಲಿ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ದೇವೇಂದ್ರ ಫಡ್ನವೀಸ್ ಅವರದ್ದು ಪಾಲಾಗಲಿದೆ.

1970ರ ಜುಲೈ 22 ರಂದು ಜನಿಸಿದ ದೇವೇಂದ್ರ ಫಡ್ನವೀಸ್ ಅವರ ತಂದೆಯ ಹೆಸರು ಗಂಗಾಧರರಾವ್ ಫಡ್ನವೀಸ್. ತಾಯಿ ಹೆಸರು ಸರಿತಾ ಫಡ್ನವೀಸ್. ದೇವೇಂದ್ರ ಫಡ್ನವೀಸ್, 1986-87ರಲ್ಲಿ ಧರ್ಮಪೀಠ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ ನಾಗ್ಪುರ ಕಾನೂನು ಕಾಲೇಜಿನಿಂದ ಪದವಿ. ಬರ್ಲಿನ್‌ನ 'ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್' ಸಂಸ್ಥೆಯಿಂದ 'ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. ಆರ್ಥಿಕ ವಿಷಯಗಳ ಕುರಿತು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.

1989ರಲ್ಲಿ ಎಬಿವಿಪಿ ಮುಖಾಂತರ ರಾಜಕೀಯಕ್ಕೆ ಧಮುಕಿದ ಬಳಿಕ ಬಿಜೆಪಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಫಡ್ನವೀಸ್ 22ನೇ ವಯಸ್ಸಿಗೆ ನಾಗ್ಪುರ ಮಹಾನಗರ ಪಾಲಿಕೆ ಸದಸ್ಯರಾಗಿ, ನಂತರ 1997ರಲ್ಲಿ 27ನೇ ವಯಸ್ಸಿಗೇ ಮೇಯರ್ ಆದರು. ಶುದ್ಧ ಹಸ್ತರೆಂದು ಗುರುತಿಸಿಕೊಂಡಿರುವ ಅವರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2006ರಲ್ಲಿ ಅಮೃತಾ ರಾಣೆ ಅವರನ್ನು ವಿವಾಹವಾದ ದೇವೇಂದ್ರ ಫಡ್ನವೀಸ್ ದಂಪತಿಗೆ ದಿವಿಜಾ ಎಂಬ ಮಗಳಿದ್ದಾಳೆ. ಅಮೃತಾ ಅವರು ನಾಗ್ಪುರದ ಎಕ್ಸಿಸ್ ಬ್ಯಾಂಕ್‌ನಲ್ಲಿ ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited