ಜಮ್ಮು-ಕಾಶ್ಮೀರ : ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಉಗ್ರರು, 4 ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವಾಹನ ತಪಾಸಣೆ ಮಾಡುತ್ತಿದ್ದ ಸೈನಿಕರನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಇಬ್ಬರು ಮೃತ ಪಟ್ಟರು" ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಚತ್ತೇರ್ ಗಾಮ್ ನಿಂದ 16 ಕಿ ಮೀ ದೂರದಲ್ಲಿ ಸೇನೆಯ ತಪಾಸಣಾ ತಂಡ ಮತ್ತು ಪೋಲೀಸ್ ಒಂದು ಖಾಸಗಿ ಕಾರನ್ನು ತಪಾಸಣೆಗೆ ನಿಲ್ಲಿಸಿದಾಗ, ಆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಗ್ರಗಾಮಿಗಳು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು ಎಂದು ಘಟನೆಯ ವಿವರಗಳನ್ನು ತಿಳಿಸಿದ ವಕ್ತಾರರು ಹೇಳಿದ್ದಾರೆ. ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವ ಈ ಉಗ್ರಗಾಮಿಗಳನ್ನು ಹಿಡಿಯಲು ಕಾರ್ಯಾಚರಣೆ ಪ್ರಾರಂಭವಾಗಿದೆ.
ಈ ಮಧ್ಯೆ ಘಟನೆಯ ಹಿನ್ನಲೆಯಲ್ಲಿ ಬುಡ್ಗಾಮ್ ಮತ್ತು ಪಕ್ಕದ ಪುಲ್ವಾಮಾ ಜಿಲ್ಲೆಗಳಲ್ಲಿ ಪೋಲೀಸರು ಕಟ್ಟೆಚ್ಚರ ಘೋಷಿಸಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿಲ್ಲ.