Untitled Document
Sign Up | Login    
Dynamic website and Portals
  
November 7, 2014

ಕಪ್ಪುಹಣ: 628 ಖಾತೆಗಳ ಪೈಕಿ 289ರಲ್ಲಿ ಹಣವಿಲ್ಲ

ನವದೆಹಲಿ : ಕಪ್ಪುಹಣ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಿಸ್‌ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವು ಭಾರತೀಯರ ಹೆಸರುಳ್ಳ ಪಟ್ಟಿಯನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನಿಂದ ಪಡೆದು ತನಿಖೆ ನಡೆಸುತ್ತಿರುವ ಎಸ್‌.ಐ.ಟಿಗೆ ಹಿನ್ನಡೆಯಾದಂತಾಗಿದೆ.

ಎಚ್‌ ಎಸ್‌ ಬಿಸಿ ಬ್ಯಾಂಕಿನ ಜಿನೆವಾ ಶಾಖೆಯಲ್ಲಿ ಇರುವ 628 ಖಾತೆಗಳ ಪೈಕಿ ಸುಮಾರು 289 ಖಾತೆಗಳಲ್ಲಿ ಹಣವಿಲ್ಲ. ಅಲ್ಲದೆ 122 ಖಾತೆಗಳ ಹೆಸರನ್ನು ಎರಡು ಬಾರಿ ಉಲ್ಲೇಖೀಸಿರುವುದರಿಂದ ಖಾತೆ ತೆರೆದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ.

ಎಚ್‌ ಎಸ್‌ ಬಿಸಿ ಜಿನೇವಾ ಬ್ಯಾಂಕಿನ ಶಾಖೆಯಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳ ಹಣಕಾಸು ವ್ಯವಹಾರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಇನ್ನೊಂದು ವಿಚಾರವೆಂದರೆ ಈ ಖಾತೆಗಳನ್ನು ಯಾವಾಗ ತೆರೆಯಲಾಯಿತು, ಅದರಲ್ಲಿ ಎಷ್ಟು ವ್ಯವಹಾರ ನಡೆಸಲಾಗಿದೆ ಎಂಬ ವಿವರವೂ ಸಿಗುತ್ತಿಲ್ಲ.

ಖಾತೆ ಹೊಂದಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆ 150 ಬಾರಿ ಸಮೀಕ್ಷೆ ಕಾರ್ಯ ನಡೆಸಿದೆ. ಇದುವರೆಗೂ ಅಂತಿಮ ವಿಚಾರಣೆ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಂ.ಬಿ.ಶಾ ಅಧ್ಯಕ್ಷತೆಯ ಎಸ್‌.ಐ.ಟಿ ವರದಿಯೊಂದನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ 300 ಖಾತೆಗಳಲ್ಲಿ ಹಣ ಇಟ್ಟಿರುವ ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ವಿಚಾರಣೆ ಆರಂಭಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ವಿದೇಶಗಳಲ್ಲಿ ಕಪ್ಪು ಹಣ ಇಡುವುದನ್ನು ನಿಯಂತ್ರಿಸುವ ಸಲುವಾಗಿ ವಿವಿಧ ದೇಶಗಳು, ತೆರಿಗೆ ಸ್ವರ್ಗ ರಾಷ್ಟ್ರಗಳ ಜತೆ ಭಾರತ ಹೊಂದಿರುವ ತೆರಿಗೆ ಮಾಹಿತಿ ವಿನಿಮಯ ಒಪ್ಪಂದದ ಬಗ್ಗೆ ಮರುಮಾತುಕತೆ ನಡೆಸಬೇಕಾಗಿದೆ ಎಂದು ಎಸ್‌.ಐ.ಟಿ ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited