Untitled Document
Sign Up | Login    
Dynamic website and Portals
  
November 11, 2014

ಗ್ರಂಥಾಲಯದಲ್ಲಿ ವಿದ್ಯಾರ್ಥಿನಿಯರಿಗೆ ನಿರ್ಬಂಧ ಹೇರಿದ ಅಲಿಘರ್ ಮುಸ್ಲಿಂ ವಿವಿ

ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ

ಲಖ್ನೌ : ವಿದ್ಯಾರ್ಥಿಗಳನ್ನು ಓದಿನಿಂದ ಚಿತ್ತವಿಕ್ಷೇಪಗೊಳಿಸುವ ಹೊಸ ವಸ್ತುವೊಂದನ್ನು ಪ್ರಸಿದ್ಧ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಕಂಡು ಹಿಡಿದಿದೆ! ಹೌದು, ಅಲೀಘರ್ ಮುಸ್ಲಿಂ ವಿವಿ ಪ್ರಕಾರ, ವಿದ್ಯಾರ್ಥಿನಿಯರು ಯುವಕರನ್ನು ದಿಕ್ಕು ತಪ್ಪಿಸುತ್ತಾರಂತೆ!

ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳಿಗೆ ಮೌಲಾನ ಆಜಾದ್ ಗ್ರಂಥಾಲಯವನ್ನು ಬಳಸುವುದಕ್ಕೆ ಅಲೀಘರ್ ಮುಸ್ಲಿಂ ವಿವಿ ಅನುಮತಿ ನಿರಾಕರಿಸಿದೆ. ಈ ಮೂಲಕ ವಿದ್ಯಾರ್ಥಿನಿಯರಿಗೆ ಅಪಮಾನ ಮಾಡಿದೆ. ಒಂದು ವೇಳೆ ಯುವತಿಯರಿಗೆ ಗ್ರಂಥಾಲಯ ಪ್ರವೇಶಕ್ಕೆ ಅನುಮತಿ ನೀಡಿದರೆ, ವಿದ್ಯಾರ್ಥಿನಿಯರಿಗಿಂತ ನಾಲ್ಕು ಪಟ್ಟು ಯುವಕರು ಅಲ್ಲಿ ಜಮಾವಣೆಯಾಗುವ ಸಾಧ್ಯತೆ ಇದ್ದು, ಗ್ರಂಥಾಲಯದ ಶಿಸ್ತು ಹಾಳಾಗುತ್ತದೆ ಎಂದು ವಿವಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಗ್ರಂಥಾಲಯವನ್ನು ವಿದ್ಯಾರ್ಥಿನಿಯರು ಬಳಸುವ ಬೇಡಿಕೆಯನ್ನು ತಿರಸ್ಕರಿಸಿರುವ ಉಪಕುಲಪತಿ ಜಮೀರ್ ಉದ್ದೀನ್ ಶಾ, ಗ್ರಂಥಾಲಯ ಬಳಸುವುದಕ್ಕೆ ಅನುಮತಿ ಕೇಳುತ್ತಿರುವ ಯುವತಿಯರ ಬೇಡಿಕೆ ನಮಗೆ ಅರ್ಥವಾಗುತ್ತದೆ. ಆದರೆ ಗ್ರಂಥಾಲಯ ಈಗಾಗಲೇ ಯುವಕರಿಂದ ತುಂಬಿ ತುಳುಕುತ್ತದೆ. ಇಂತಹ ಸಂದರ್ಭದಲ್ಲಿ ಯುವತಿಯರಿಗೂ ಪ್ರವೇಶ ನೀಡಿದರೆ ಶಿಸ್ತು ಹದಗೆಡುತ್ತದೆ, ಈ ಹಿನ್ನೆಲೆಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

1300 ಆಸನಗಳನ್ನು ಹೊಂದಿರುವ ವಿವಿ ಗ್ರಂಥಾಲಯದಲ್ಲಿ ಮಹಿಳೆಯರಿಗೆ ಮೀಸಲಿಟ್ಟಿರುವುದು ಕೇವಲ 12 ಆಸನಗಳನ್ನು ಮಾತ್ರ ಎಂಬುದು ಗಮನಾರ್ಹ ವಿಷಯ.

ವಿವಿ ತೀರ್ಮಾನ ಖಂಡಿಸಿರುವ ಮಹಿಳಾ ಕಾಲೇಜಿನ ಅಧ್ಯಕ್ಷರು, ಗ್ರಂಥಾಲಯದಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶದ ಕೊರತೆ ಇದ್ದಲ್ಲಿ, ಅಲ್ಲಿನ ಪುಸ್ತಕಗಳನ್ನು ಕೊಂಡೊಯ್ದು ಓದುವ ವ್ಯವಸ್ಥೆಯನ್ನಾದರೂ ಕಲ್ಪಿಸಲಿ ಎಂದು ಒತ್ತಾಯಿಸಿದ್ದಾರೆ. ಮಹಿಳಾ ಕಾಲೇಜಿನಲ್ಲಿರುವ ಗ್ರಂಥಾಲಯದಲ್ಲಿರುವ ಪುಸ್ತಕಗಳಿಂದ ಸಾಕಷ್ಟು ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿವಿ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದು ಓದಲು ಅವಕಾಶ ನೀಡಬೇಕೆಂಬ ಬೇಡಿಕೆ ಮುಂದಿಡಲಾಗಿತ್ತು.

ವಿದ್ಯಾರ್ಥಿನಿಯರ ಪ್ರವೇಶದಿಂದ ಗ್ರಂಥಾಲಯದ ಶಿಸ್ತಿಗೆ ಧಕ್ಕೆಯುಂಟಾಗುತ್ತದೆ ಎಂದು ಜಮೀರ್ ಉದ್ದೀನ್ ಶಾ ಹೇಳಿಕೆ ನೀಡಿರುವುದಕ್ಕೆ ದೇಶಾದ್ಯಂತ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ಪ್ರಪಂಚ 21ಶತಮಾನದಲ್ಲಿ ಸಮಾನತೆಯ ನೆಲೆಯಲ್ಲಿ ವಿಕಾಸವಾಗುತ್ತಿದ್ದರೆ ವಿಶ್ವವಿದ್ಯಾನಿಯಲವೊಂದು ಯುವಕ/ಯುವತಿಯರ ನಡುವೆ ಅಸಮಾನತೆ ಮೂಡಿಸಿ ಶಿಲಾಯುಗದ ಮಾನಸಿಕತೆಯಲ್ಲೇ ವರ್ಸಿಸುತ್ತಿರುವುದು ವಿಪರ್ಯಾಸ!

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited