BW News Bureau : ವರನಟ ಡಾ.ರಾಚ್ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿರೂಪಗೊಳಿಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ನಗರದ ಬಲಮುರಿ ಸೇವಾ ಸಂಘದ ವತಿಯಿಂದ ಈ ಪ್ರತಿಮೆಯನ್ನು ನಿರ್ಮಾಣಗೊಳಿಸಲಾಗಿದ್ದು ಇದೇ ನ. 23ರಂದು ಪ್ರತಿಮೆಯ ಆನಾವರಣಗೊಳ್ಳಬೇಕಿತ್ತು. ನ.12ರಂದು ಈ ಪ್ರತಿಮೆಯನ್ನು ಪ್ರತಿಷ್ಥಾಪನೆ ಮಾಡಲಾಗಿತ್ತು.
ಸ್ಥಳದಲ್ಲಿ ರಾಜ್ ಆಭಿಮಾನಿಗಳು ಜಮಾಯಿಸಿದ್ದು ಕೂಡಲೇ ಕಿಡಿಗೇಡಿಗಳನ್ನು ಬಂದಿಸಬೇಕೆಂದು ಅಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನ್ನಡಪರ ಸಂಘಟನೆಗಳು ಈ ಹೇಯ ಕೃತ್ಯವನ್ನು ಖಂಡಿಸಿದ್ದು ವಿರೂಪಗೊಳಿಸಿದ ಆರೋಪಿಗಳನ್ನು ಬಂದಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ದಿ, ಪೇಪರ್ ನಿಂದ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಆದರೆ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಯಾರೂ ದೂರು ನೀಡಿಲ್ಲ, ನಾವೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.