Untitled Document
Sign Up | Login    
Dynamic website and Portals
  
November 14, 2014

ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಪೃಥ್ವಿ-2 ಕ್ಷಿಪಣಿ ಉಡಾವಣೆ ಪೃಥ್ವಿ-2 ಕ್ಷಿಪಣಿ ಉಡಾವಣೆ

ಒರಿಸ್ಸಾ : ದೇಶೀಯವಾಗಿ ನಿರ್ಮಿಸಲಾಗಿರುವ ಅಣ್ವಸ್ತ್ರ ವಾಹಕ ಪೃಥ್ವಿ-2 ಕ್ಷಿಪಣಿಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಅತ್ಯಾಧುನಿಕ ವಿನೂತನ ತಂತ್ರಜ್ನಾನ ಹೊಂದಿರುವ ಸರ್ಫೇಸ್ ಟು ಸರ್ಫೇಸ್ ಪೃಥ್ವಿ -2 ಕ್ಷಿಪಣಿ, 500ರಿಂದ 1,000 ಕಿಲೋ ತೂಕದ ಅಣ್ವಸ್ತ್ರಗಳನ್ನು ಒಯ್ಯಬಲ್ಲದು. 350 ಕಿ.ಮೀ.ಗಳ ದೂರ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಸೇನೆಯಿಂದ ಬಳಕೆ ಪ್ರಯೋಗಾರ್ಥವಾಗಿ ಒರಿಸ್ಸಾ ಸಮೀಪದ ಚಾಂದೀಪುರದಿಂದ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಾಯಿತು. ನ.14ರ ಬೆಳಗ್ಗೆ ಪ್ರಥ್ವಿ - 2 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾತೆಂದು ಸೇನಾ ಮೂಲಗಳು ತಿಳಿಸಿವೆ.

ಪೃಥ್ವಿ-2, ಡಿ.ಆರ್.ಡಿ.ಒನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗಿರುವ ಪ್ರಥಮ ಕ್ಷಿಪಣಿಯಾಗಿದೆ. ಇದೇ ವರ್ಷದ ಜ.7ರಂದು ಪೃಥ್ವಿ-2 ಕ್ಷಿಪಣಿಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಡಿ.ಆರ್.ಡಿ.ಒ ವಿಜ್ನಾನಿಗಳ ನೇತೃತ್ವದಲ್ಲಿ ಕ್ಷಿಪಣಿ ಉಡಾವಣೆ ನಡೆದಿದೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited