Untitled Document
Sign Up | Login    
Dynamic website and Portals
  
November 24, 2014

ಬುರ್ದ್ವಾನ್ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಢಾಕಾ : ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ನಡೆದ ಸ್ಫೋಟದ ಪ್ರಮುಖ ರೂವಾರಿ ಸಾಜೀದ್‌ನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಾಂಗ್ಲಾದೇಶದಲ್ಲಿ ಮುಂಜಾನೆ ಬಂಧಿಸಿದ್ದಾರೆ.

ಬಾಂಗ್ಲಾದೇಶದ ನಿಷೇಧಿತ ಇಸ್ಲಾಮಿ ಉಗ್ರ ಸಂಘಟನೆಯಾದ ಜಮಾಲ್-ಉಲ್-ಮುಜಾಹಿದೀನ್ (ಜೆಎಂಬಿ) ಸಂಘಟನೆಯ ಸದಸ್ಯರಾಗಿರುವ ಸಾಜೀದ್‌ನ ಪತ್ನಿ ಫಾತೀಮಾ ಬೇಗಂ, ಮೊಹ್ಮದ್ ಇಷ್ರಾತ್ ಅಲಿ ಶೇಖ್, ಮೊಹಮದ್ ಶೌಖತ್ ಸರ್ದಾರ್ ಹಾಗೂ ಅಬ್ದುಲ್ ಖಾಜಿ ಬಂಧಿತ ಉಗ್ರರು.

ಫಾತೀಮಾ ಬೇಗಂ (ಸಾಜೀದ್ ಪತ್ನಿ) ಇತ್ತೀಚೆಗೆ ಹೊಸದಾಗಿ ರಚಿಸಲಾಗಿರುವ ಬಾಂಗ್ಲಾ ದೇಶದ ನಿಷೇಧಿತ ಜಮಾಲ್-ಉಲ್-ಮುಜಾಹಿದೀನ್ ಸಂಘಟನೆಯ ಮಹಿಳಾ ವಿಭಾಗದ ನಾಯಕಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಪಶ್ಚಿಮ ಬಂಗಾಲ ಪೊಲೀಸರು ಹಾಗೂ ಎನ್‌ಐಎ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಜೆಎಂಬಿ ಸಂಘಟನೆಯ ಸಾಜೀದ್ ಹಾಗೂ ಅಮ್ಜದ್ ಶೇಖ್ ಎಂಬುವವರನ್ನು ಬಂಧಿಸಿದ್ದರು. ಈಗ ನಾಲ್ವರ ಬಂಧನದೊಂದಿಗೆ ಒಟ್ಟು ಬುರ್ದ್ವಾನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ ಆರಕ್ಕೇರಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited