ಮುಂಬೈ : ಸಬ್ಮರೀನ್ ಐಎನ್ಎಸ್ ಸಿಂಧೂರತ್ನ ಅಗ್ನಿಗಾಹುತಿಯಾದ ಪ್ರಕರಣದಲ್ಲಿ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ.
ಸಿಂಧೂರತ್ನ ಅಗ್ನಿ ಅವಘಡದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಡಿ.ಕೆ ಜೋಷಿ ರಾಜಿನಾಮೆ ನೀಡಬೇಕಾಗಿ ಬಂದಿತ್ತು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವೆಸ್ಟರ್ನ್ ಕಮಾಂಡ್ ಪ್ರಧಾನ ಕಚೇರಿಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಐಎನ್ಎಸ್ ಸಿಂಧಝೂರತ್ನ ದುರಂತದ ತನಿಖೆ ನಡೆಸಿದ ತನಿಖಾ ತಂಡ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರು ಎಂದು ಸಾಬೀತಾಗಿರುವುದಾಗಿ ಪರಿಕ್ಕರ್ ಹೇಳಿದ್ದಾರೆ.
ಕಳೆದ ಫೆ.26ರಂದು ಮುಂಬೈನಲ್ಲಿ ತರಬೇತಿ ಮತ್ತು ನಿರೀಕ್ಷಣೆಗಾಗಿ ನಿಲ್ಲಿಸಿದ ಐಎನ್ಎಸ್ ಸಿಂಧೂರತ್ನ ಅಗ್ನಿಗಾಹುತಿಯಾಗಿತ್ತು.