ಲಖ್ನೌ : 'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಸುಮಾರು 57ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಆರ್.ಎಸ್.ಎಸ್ ಹಾಗೂ ಭಜರಂಗದಳ ಹಮ್ಮಿಕೊಂಡಿದ್ದ ಘರ್ ವಾಪಸಿ ಕಾರ್ಯಕ್ರಮದಲ್ಲಿ 57 ಕುಟುಂಬದ 200 ಮುಸ್ಲಿಮರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್.ಎಸ್.ಎಸ್ ನ ಮುಖಂಡ, ರಾಜೇಶ್ವರ್ ಸಿಂಗ್, ಶೀಘ್ರವೇ ಮತ್ತಷ್ಟು ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಹಿಂದೂ ಧರ್ಮಕ್ಕೆ ವಾಪಸ್ಸಾಗಲಿದ್ದಾರೆ. ಅಲೀಘರ್ ನಲ್ಲಿ ಕ್ರಿಸ್ ಮಸ್ ವೇಳೆಗೆ 5,000 ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ವಾಪಸ್ಸಾಗಲಿದ್ದಾರೆ ಎಂದು ರಾಜೇಶ್ವರ್ ಸಿಂಗ್ ಹೇಳಿದ್ದಾರೆ.
ಘರ್ ವಾಪಸಿ ಕಾರ್ಯಕ್ರಮದಲ್ಲಿ ಎಲ್ಲಾ ಮುಸ್ಲಿಮರಿಗೂ ಹೊಸ ಹೆಸರುಗಳನ್ನು ನೀಡಲಾಗಿದ್ದು ಮತದಾನದ ಗುರುತಿನ ಚಿಟಿ, ಆಧಾರ್ ಕಾರ್ಡ್ ಗಳಲ್ಲಿ ಹಿಂದೂ ಧರ್ಮದ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಹಿಂದೂ ಧರ್ಮಕ್ಕೆ ವಾಪಸ್ಸಾದ ಸಂಕೇತವಾಗಿ ಕಾಳಿ ಮಾತೆಯ ವಿಗ್ರಹಕ್ಕೆ ಕುಟುಂಬದ ಸದಸ್ಯರುಗಳು ಆರತಿ ಬೆಳಗಿದರು. ಆಗ್ರಾದಲ್ಲಿ ಈ ವರೆಗೂ2.73 ಲಕ್ಷ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.