ನವದೆಹಲಿ : ತಲೆಗೆ ತೀವ್ರ ಪೆಟ್ಟಾಗಿದ್ದ ಪರಿಣಾಮ ಆಸ್ಪತ್ರೆಗೆ ಸೇರಿದ್ದ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ 4 ತಿಂಗಳಾದರೂ ಕೋಮಾ ಸ್ಥಿತಿಯಿಂದ ಹೊರಬಂದಿಲ್ಲ.
ಲೋಕಸಭಾ ಚುನಾವಣೆಯಾದ ಕೆಲವೇ ತಿಂಗಳಲ್ಲಿ ಜಸ್ವಂತ್ ಸಿಂಗ್ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರ ಮಾಹಿತಿ ಪ್ರಕಾರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡಿಲ್ಲ.
ಜಸ್ವಂತ್ ಸಿಂಗ್ ಅವರು ಕೃತಕ ಉಸಿರಾಟದ ಸಾಧನದಿಂದ ಇನ್ನೂ ಕೋಮಾ ಸ್ಥಿತಿಯಲ್ಲೇ ಇದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಜಸ್ವಂತ್ ಸಿಂಗ್ ಅವರ ಆರೋಗ್ಯವನ್ನು ಪ್ರತಿದಿನವೂ ಗಮನಿಸುವುದಕ್ಕಾಗಿಯೇ ವೈದ್ಯರ ತಂಡ ನಿಯೋಜಿತವಾಗಿದೆ.
76 ವರ್ಷದ ಜಸ್ವಂತ್ ಅವರು ಮನೆಯಲ್ಲಿ ಬಿದ್ದು, ತಲೆಗೆ ಗಾಯಗೊಂಡು ಆ.8ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಜಸ್ವಂತ್ ಸಿಂಗ್ ಅವರ ಆರೋಗ್ಯದ ಚೇತರಿಕೆಗಾಗಿ ನುರಿತ ವೈದ್ಯರನ್ನು ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದರಿಂದ ಜಸ್ವಂತ್ ಸಿಂಗ್ ಆರೋಗ್ಯ ಚೇತರಿಸಿಕೊಳ್ಳುತ್ತಿಲ್ಲ ಎಂದು ಆರ್ಮಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.