ಕಲಬುರ್ಗಿ : 'ಕಲಬುರ್ಗಿ' ಕಾಂಗ್ರೆಸ್ ಮುಖಂಡ ಮಹಮ್ಮದ್ ಶಬ್ಬೀರ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ರೆಹಮಾನ್, ಮೊಹಮದ್ ಇರ್ಫಾನ್, ಶೇಖ್ ಮೋಬಿನ ಬಂಧಿತ ಆರೋಪಿಗಳಾಗಿದ್ದು ಅವರಿಂದ ನಾಡಪಿಸ್ತೂಲ್, ಮಾರಕಾಸ್ತ್ರ ಹಾಗೂ ತವೇರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ಜೈಲಿನಲ್ಲಿರುವ ಶಂಶೀರ್ ಎಂಬುವವನು ಈ ಕೊಲೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಡಿ.9ರ ಬೆಳಗ್ಗೆ ನಗರದ ರೇಡಿಯೋ ಸ್ಟೇಷನ್ ಬಳಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಶಬ್ಬೀರ್ ಹಾಗೂ ಅವರ ಸ್ನೇಹಿತರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ತವೇರಾ ವಾಹನದಲ್ಲಿ ಬಂದಿದ್ದ 5ಕ್ಕೂ ಹೆಚ್ಚು ದುಷ್ಕರ್ಮಿಗಳು ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಗುಂಡಿನ ದಾಳಿ ನಡೆಸಿ ಕಾಂಗ್ರೆಸ್ ಮುಖಂಡನನ್ನು ಹತ್ಯೆಗೈದಿದ್ದರು.