Untitled Document
Sign Up | Login    
Dynamic website and Portals
  
December 12, 2014

ಬೆಂಗಳೂರು ವ್ಯಕ್ತಿಯಿಂದ ಇಸೀಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಣೆ!

ಬೆಂಗಳೂರು ವ್ಯಕ್ತಿಯಿಂದ ಇಸೀಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಣೆ!

BW News Bureau : 'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ, ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇಸೀಸ್ ಉಗ್ರರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಂಗಳೂರಿನವನೆಂದು ತಿಳಿದುಬಂದಿದ್ದು ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ. ತನಿಖಾ ದಳ ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತರು ಸಾಥ್ ನೀಡಿದ್ದಾರೆ.

ಎಂ.ಎನ್.ಸಿ ಉದ್ಯೋಗಿಯಾಗಿರುವ ಮೆಹದಿ ಎಂಬಾತ ಇಸೀಸ್ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದಾನೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಸುದ್ದಿ ಪ್ರಕಟಿಸಿದೆ. ಮೆಹದಿ ನಿರ್ವಹಿಸುತ್ತಿರುವ ಟ್ವಿಟರ್ ಖಾತೆಗೆ 17,700 ಜನ ಅನುಯಾಯಿಗಳಿದ್ದು ಭಾರತದಲ್ಲಿ ಇಸೀಸ್ ಸಂಘಟನೆ ಸಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸುದ್ದಿ ಪ್ರಕಟಿಸಿರುವ ವಾಹಿನಿಗಳು ಮೆಹದಿಯ ಪೂರ್ಣಹೆಸರನ್ನು ಬಹಿರಂಗಗೊಳಿಸಿಲ್ಲ. ಪೊಲೀಸ್ ಮೂಲಗಳ ಪ್ರಕಾರ ಶಮಿ ವಿಟ್ನೆಸ್ ಎಂಬ ಇಸೀಸ್ ಟ್ವೀಟರ್ ಖಾತೆ ಹೊಂದಿರುವ ವ್ಯಕ್ತಿ ಇಸೀಸ್ ಸೇರಲು ಯತ್ನಿಸಿದ್ದನಾದರೂ ಆತ ತನ್ನ ಕುಟುಂಬದ ಆಧಾರವಾಗಿರುವುದರಿಂದ ಅದು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ತನಿಖೆ ದೃಷ್ಟಿಯಿಂದ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ನಗರ ಪೊಲೀಸರು ನಿರಾಕರಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited