ನವದೆಹಲಿ : 'ಹಣದುಬ್ಬರ' ದರ ನವೆಂಬರ್ ತಿಂಗಳಲ್ಲಿ ಶೇ.0 ದಾಖಲಾಗಿದ್ದು ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನಗಳು ನನಸಾಗಿದೆ ಎಂದು ಹೇಳಬಹುದಾಗಿದೆ.
ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ ಹಣದುಬ್ಬರ ದರ ಇಳಿಕೆಯಾಗುತ್ತಿದ್ದು ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ ಬೆಲೆ ಕಡಿಮೆಯಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ದೇಶದಲ್ಲಿ 'ಸಗಟು ಬೆಲೆ ಸೂಚ್ಯಂಕ' ಆಧಾರಿತ ಹಣದುಬ್ಬರ ದರವು 2013ರ ಅಕ್ಟೋಬರ್ ತಿಂಗಳಿನಲ್ಲಿ ಶೇ. 1.77 ಹಾಗೂ ನವೆಂಬರ್ ನಲ್ಲಿ ಶೇ. 7.52ರಷ್ಟಿತ್ತು. 2014ರ ಮೇ ತಿಂಗಳಿನಿಂದ ಆಹಾರ ಹಣದುಬ್ಬರ ಇಳಿಲಾರಂಭಿಸಿತ್ತು. ಸೋಮವಾರ ಸರ್ಕಾರವು ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಈ ಪ್ರಮಾಣವು ಮೂರು ವರ್ಷಗಳ ಕನಿಷ್ಠವಾದ ಶೇ. 0.63 ರಷ್ಟು ದಾಖಲಾಗಿದೆ.
ಸಗಟು ಬೆಲೆ ಸೂಚ್ಯಂಕ' ಬೆಲೆಯು 2009ರ ಜುಲೈ ತಿಂಗಳಿನಲ್ಲಿ ಶೇ. (-)0.3 ಪ್ರಮಾಣದಷ್ಟಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಈರುಳ್ಳಿ ದರದ ಇಳಿಕೆ ಶೇ. 59.77ರಷ್ಟಿತ್ತು. ಈ ಪ್ರಮಾಣವು ಶೇ. 56.28 ಕ್ಕೆ ಕಡಿಮೆಯಾಗಿದೆ. ತರಕಾರಿಗಳ ಸಂಕೋಚನ ಪ್ರಮಾಣವು ಶೇ. 28.57ರಷ್ಟಿದೆ.