ಸಿಡ್ನಿ : ಸಿಡ್ನಿಯ ಕಾಫಿ ಕೆಫೆ ಮೇಲೆ ದಾಳಿ ನಡೆಸಿ ಸಾರ್ವಜನಿಕರನ್ನು ಒತ್ತೆಯಾಳುಗಳಾಗಿಟ್ಟುಕೊಂಡಿದ್ದ ಉಗ್ರರನ್ನು ಹೊಡೆದುರುಳಿಸುವಲ್ಲಿ ಆಸ್ಟ್ರೇಲಿಯಾ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಡಿ.15ರ ಬೆಳಗ್ಗೆಯಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸೋಮವಾರ ತಡರಾತ್ರಿ 2.10ರವರೆಗೂ ನಡೆದಿದ್ದು, ಪೊಲೀಸರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾರ್ಯಾಚರಣೆ ವೇಳೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಇದೇ ವೇಳೆ ಕಾಫಿ ಕೆಫೆಯಲ್ಲಿ ಸಿಲುಕಿದ್ದ ಭಾರತೀಯ ಮೂಲದ ಇಬ್ಬರು ಟೆಕ್ಕಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಸಾಫ್ಟವೇರ್ ಉದ್ಯೋಗಿಯಾಗಿ ಸಿಡ್ನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿಶ್ವಕಾಂತ್ ಅಂಕಿರೆಡ್ಡಿ ಸೇರಿದಂತೆ ಮತ್ತೋರ್ವ ಹೆಸರು ತಿಳಿಯದ ಇಬ್ಬರು ಭಾರತೀಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಡ್ನಿಯ ನಂತರ ಬೆಂಗಳೂರು ತಮ್ಮ ಮುಂದಿನ ಗುರಿ ಎಂದು ಐ.ಎಸ್.ಐ.ಎಸ್ ಉಗ್ರರು ಹೇಳಿದ್ದು, ನಗರದಲ್ಲಿ ಆತಂಕ ಉಂಟಾಗಿದೆ.