Untitled Document
Sign Up | Login    
Dynamic website and Portals
  
December 16, 2014

ವಿದೇಶದಲ್ಲಿ ಕಪ್ಪು ಹಣ ಇಡುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ

ಕಪ್ಪು ಹಣ(ಸಾಂಧರ್ಬಿಕ ಚಿತ್ರ) ಕಪ್ಪು ಹಣ(ಸಾಂಧರ್ಬಿಕ ಚಿತ್ರ)

ವಾಷಿಂಗ್ ಟನ್ : 'ಕಪ್ಪು ಹಣ'ದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಚಿಂತಕರ ತಂಡವೊಂದು ಭಾರತದ ಕಪ್ಪು ಹಣದ ಬಗ್ಗೆ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ.

ವಿದೇಶಗಳಲ್ಲಿ ಕಪ್ಪು ಹಣ ಇಡುವ ದೇಶಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಅಂತಾರಾಷ್ಟ್ರೀಯ ಚಿಂತಕರು ಹೇಳಿದ್ದಾರೆ. 2003ರಿಂದ 2012 ರವರೆಗೆ ಭಾರತದಿಂದ ವಿದೇಶೀ ಬ್ಯಾಂಕ್‌ಗಳಲ್ಲಿ ಹೂಡಿಕೆಯಾದ ಮೊತ್ತದ ಪ್ರಮಾಣ ಸುಮಾರು 94.76 ಬಿಲಿಯನ್ ಡಾಲರ್ ಗಳಾಗಿದೆ ಎಂದು ಅಂದಾಜಿಸಲಾಗಿದ್ದು ಅತೀ ಹೆಚ್ಚು ಕಪ್ಪು ಹಣ ಇಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ದೇಶವಾಗಿ ಹೊರಹೊಮ್ಮಿದೆ.

ವಿದೇಶಗಳಲ್ಲಿ ಕಪ್ಪುಹಣ ಇಡುವ ಬಗ್ಗೆ ಜಾಗತಿಕ ಆರ್ಥಿಕ ಸಮಗ್ರತೆ ಸಂಸ್ಥೆ ಅಧ್ಯಯನ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಭಾರತದಿಂದ ವಿದೇಶಿ ಬ್ಯಾಂಕುಗಳಿಗೆ ರಫ್ತಾದ ಒಟ್ಟಾರೆ ಹಣಕ್ಕಿಂತ 2003-2012ರ ಅವಧಿಯಲ್ಲಿ ಶೇ.10 ರಷ್ಟು ಹೆಚ್ಚು ಹಣ ರಫ್ತಾಗಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ವಿದೇಶಿ ಬ್ಯಾಂಕುಗಳಿಗೆ ಭಾರತದಿಂದ ಸುಮಾರು 6 ಲಕ್ಷ ಕೋಟಿ ಹಣ ರಫ್ತಾಗಿತ್ತು ಎಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶದಲ್ಲಿ ಕಪ್ಪು ಹಣ ಇಡುವ ವಿಚಾರದಲ್ಲಿ ಭಾರತಕ್ಕೆ ಮೂರನೇ ಸ್ಥಾನ ದೊರೆತಿದ್ದರೆ ರಷ್ಯಾ ಮೊದಲನೇ ಸ್ಥಾನ ಹಾಗೂ ಚೀನಾ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಚಿಂತಕರು ನಡೆಸಿರುವ ಅಧ್ಯಯನ ಭಾರತ ನಡೆಸುತ್ತಿರುವ ಕಪ್ಪು ಹಣತನಿಖೆಗೆ ಉಪಯೋಗವಾಗುವ ಸಾಧ್ಯತೆ ಇದೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited