ಲಖ್ನೌ : ಕೇವಲ ಮದುವೆಯ ಕಾರಣದಿಂದಾಗಿ ಅನ್ಯ ಧರ್ಮೀಯ ಯುವತಿಯರು ಇಸ್ಲಾಂ ಗೆ ಮತಾಂತರವಾಗುವುದು ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇಲ್ಲದೇ ಕೇವಲ ತಾವು ಮುಸ್ಲಿಂ ಯುವಕರನ್ನು ವಿವಾಹವಾಗುವ ಉದ್ದೇಶದಿಂದ ಮುಸ್ಲಿಮೇತರ ಯುವತಿಯರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದು ಸಾಂವಿಧಾನಿಕವಾಗಿ ಮಾನ್ಯವಲ್ಲ ಎಂದು ಕೋರ್ಟ್ ತಿಳಿಸಿದೆ.
ಅಂತರ್ಧಮ ವಿವಾಹವಾಗಿ ರಕ್ಷಣೆಗಾಗಿ ಮನವಿ ಸಲ್ಲಿಸಿದ್ದ 5 ಜನರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೆಸರ್ವಾನಿ, ಈ ಮಹತ್ವದ ಆದೇಶ ನೀಡಿದೆ. ಐದೂ ಪ್ರಕರಣಗಳಲ್ಲಿ ಹಿಂದೂ ಯುವತಿಯರು ಕೇವಲ ಮುಸ್ಲಿಂ ಯುವಕರನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹಿಂದೂ ಯುವತಿಯರು ತಮಗೆ ಇಸ್ಲಾಂ ಬಗ್ಗೆ ಏನೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಇಸ್ಲಾಂ ಧರ್ಮದ ಬಗ್ಗೆ ಏನೂ ಅರಿಯದೇ ಮುಸ್ಲಿಂ ಯುವಕರನ್ನು ವಿವಾಹರಾದಲ್ಲಿ ಅದು ಅಸಾಂವಿಧಾನಿಕ ಎಂದು ಹೇಳಿದೆ.
ಇಸ್ಲಾಂ ಬಗ್ಗೆ ತಿಳಿದಿರದ ಯುವತಿಯರನ್ನು ವಿವಾಹವಾಗಬೇಡಿ, ಅನ್ಯಧರ್ಮದ ಬಗ್ಗೆ ತಿಳಿಯದ ಮುಸ್ಲಿಂ ಯುವತಿಯರೂ ಅಂತರ್ಧರ್ಮ ವಿವಾಹವಾಗಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.