BW News Bureau : ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಅಧಿಕೃತ ಫೇಸ್ ಬುಕ್ ಖಾತೆಗೆ ಮೇಯರ್ ಶಾಂತಕುಮಾರಿ ಡಿ.22ರಂದು ಚಾಲನೆ ನೀಡಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ಫೇಸ್ ಬುಕ್ ಖಾತೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಬಿಬಿಎಂಪಿಯ ಫೇಸ್ ಬುಕ್ ಟೈಮ್ ಲೈನ್ ಮೇಲೆ ಸಮಸ್ಯೆಗಳ ಬಗ್ಗೆ ವಿವವ ನೀಡಿದರೆ ಅಧಿಕಾರಿಗಳು ಶೀಘ್ರವೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ.
ಜನರ ಸಮಸ್ಯೆಗಳಿಗೆ ಬಿಬಿಎಂಪಿ ನೇರವಾಗಿ ಸ್ಪಂಧಿಸಲು ಈ ಹೊಸ ಯೋಜನೆಯನ್ನು ರೂಪಿಸಿರುವುದಾಗಿ ಮೇಯರ್ ಶಾಂತಕುಮಾರಿ ಹೇಳಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಫೇಸ್ ಬುಕ್ ಅಕೌಂಟ್ ತೆರೆಯುವ ಮೂಲಕ ಹೊಸ ಯೋಜನೆಯನ್ನು ಕೈಗೊಂಡಿದೆ. ಬಿಬಿಎಂಪಿಯ ಅಧಿಕೃತ ಫೇಸ್ಬುಕ್ ಅಕೌಂಟ್ಗೆ ಮೇಯರ್ ಶಾಂತಕುಮಾರಿ ಬಿಬಿಎಂಪಿ ಕಚೇರಿಯಲ್ಲಿ ಚಾಲನೆ ನೀಡಿದರು.
ಫೇಸ್ಬುಕ್ನ ಮೂಲಕ ಬಿಬಿಎಂಪಿ ತಮ್ಮ ದೂರು, ಸಮಸ್ಯೆ, ಮನವಿ ಇತ್ಯಾಧಿಗಳನ್ನು ಈ ಫೇಸ್ಬುಕ್ ಖಾತೆ ನಲ್ಲಿ ದಾಖಲಿಸಬಹುದು. ಈ ನೂತನ ಯೋಜನೆಯ ಮೂಲಕ ಸಮಸ್ಯೆಗಳ ಶೀಘ್ರ ಇತ್ಯರ್ಥ ಹಾಗೂ ಸಮಯ ವ್ಯರ್ಥವಾಗುವುದನ್ನು ತಡೆಯುವುದು ಬಿಬಿಎಂಪಿಯ ಮುಖ್ಯ ಉದ್ದೇಶವಾಗಿದೆ.