Untitled Document
Sign Up | Login    
Dynamic website and Portals
  
January 14, 2015

ಭಾರತದಲ್ಲಿ ಇನ್ಮುಂದೆ ಶಸ್ತ್ರಾಸ್ತ್ರಗಳ ಪರವಾನಗಿ ಪಡೆಯುವುದು ಸುಲಭ!

ಭಾರತದಲ್ಲಿ ಇನ್ಮುಂದೆ ಶಸ್ತ್ರಾಸ್ತ್ರಗಳ ಪರವಾನಗಿ ಪಡೆಯುವುದು ಸುಲಭ!

ನವದೆಹಲಿ : ಇನ್ನು ಮುಂದಿನ ದಿನಗಳಲ್ಲಿ ಪರವಾನಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಭಾರತದಲ್ಲಿ ಸುಲಭವಾಗಲಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಪರವಾನಗಿ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಯನ್ನು ಸರಳ ಮತ್ತು ಸಾರ್ವಜನಿಕ ಸ್ನೇಹಿಯನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಎಕನಾಮಿಕ್ ಟೈಮ್ಸ್ ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು ಭಾರತದಲ್ಲಿ ಚಾಲ್ತಿಯಲ್ಲಿರುವ 55 ವರ್ಷಗಳ ಹಳೆಯ ಶಸ್ತ್ರಾಸ್ತ್ರ ಪರವಾನಗಿ ಮಂಜೂರು ಪ್ರಕ್ರಿಯೆಯನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಯಾರೇ ಶಸ್ತ್ರಾಸ್ತ್ರ ಪರವಾನಗಿ ಪಡೆಯಬೇಕಿದ್ದರೆ ಅದಕ್ಕೆ ಸಂಬಂಧಿಸಿದಂತೆ ಬರೊಬ್ಬರಿ 2 ಡಜನ್ ದಾಖಲೆಗಳನ್ನು ನೀಡಬೇಕಿದೆ. ಅಗತ್ಯವಿರುವ ದಾಖಲೆ ನೀಡಿದರೂ ಪರವಾನಗಿ ನೀಡುವುದಕ್ಕೆ ಸರ್ಕಾರದಿಂದ ಯಾವುದೇ ಗಡುವು ನೀಡಲಾಗಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವುದರ ಜೊತೆಗೆ ಕಾಲಮಿತಿಯನ್ನೂ ನಿಗದಿ ಪಡಿಸಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಸಿಂಗಲ್ ಹಾಗೂ ಡಬಲ್ ಬ್ಯಾರೆಲ್ ಗನ್ ತಯಾರಿ ಮಾಡಲು 95 ಖಾಸಗಿ ಕಂಪನಿಗಳಿಗೆ ಮಾತ್ರ ಪರವಾನಗಿ ಇದ್ದು ಕೇವಲ 3 ಕಂಪನಿಗಳಿಗೆ ವಿವಿಧ ರೀತಿಯ ಶಶ್ತ್ರಾಸ್ತ್ರಗಳನ್ನು ತಯಾರಿ ಮಾಡುವುದಕ್ಕೆ ಪರವಾನಗಿ ನೀಡಲಾಗಿದೆ.

ಇದೇ ವೇಳೆ ಶಸ್ತ್ರಾಸ್ತ್ರ ಪರವಾನಗಿ ಆನ್ ಲೈನ್ ಡೇಟಾಬೇಸ್ ಪ್ರಾರಂಭಿಸಲೂ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ದೇಶಾದ್ಯಂತ ಎಷ್ಟು ಜನರ ಬಳಿ ಶಸ್ತ್ರಾಸ್ತ್ರ ಪರವಾನಗಿ ಇದೆ ಎಂಬ ಮಾಹಿತಿಯನ್ನು ಏಕಕಾಲಕ್ಕೆ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited