Untitled Document
Sign Up | Login    
Dynamic website and Portals
  
January 29, 2015

2016ರ ಟಿ-2೦ ವಿಶ್ವಕಪ್ ಗೆ ಭಾರತ ಆತಿಥ್ಯ

ದುಬೈ : 2016ರ ಟಿ-2೦ ವಿಶ್ವಕಪ್ ಗೆ ಭಾರತ ಆತಿಥ್ಯ ವಹಿಸಲಿದೆ. ಟೂರ್ನಿ ಮಾರ್ಚ್, ಏಪ್ರಿಲ್ ನಲ್ಲಿ ನಡೆಯಲಿದ್ದು, ವೇಳಾಪಟ್ಟಿಗೆ ಐಸಿಸಿ ಅನುಮೋದನೆ ನೀಡಿದೆ.

2016ರ ಮಾರ್ಚ್‌ 11ರಿಂದ ತೊಡಗಿ ಎಪ್ರಿಲ್‌ 3ರ ವರಗೆ ನಡೆಯಲಿದ್ದು, ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಭಾರತದಲ್ಲಿ ಟೂರ್ನಿ ನಡೆಯುವುದಾಗಿ ಐಸಿಸಿ ಸ್ಪಷ್ಟನೆ ನೀಡಿದೆ.

2017ರಲ್ಲಿ ಜೂನ್‌ 1ರಿಂದ 19ರ ತನಕ ಇಂಗ್ಲಂಡ್‌ನ‌ಲ್ಲಿ ನಡೆಯಲಿರುವ ಚಾಂಪ್ಯನ್ಸ್‌ ಟ್ರೋಫಿ ವೇಳಾಪಟ್ಟಿಗೆ ಮಂಡಳಿಯು ಅನುಮೋದನೆ ನೀಡಿತು. 2019ರಲ್ಲಿ ಇಂಗ್ಲಂಡ್‌ 50 ಓವರ್‌ಗಳ ವಿಶ್ವ ಕಪ್‌ ಪಂದ್ಯವನ್ನು ಮೇ 30ರಿಂದ ಜೂನ್‌ 15ರ ವರೆಗೆ ನಡೆಸಿಕೊಡಲಿದೆ. 2017ರ ವನಿತಾ ವಿಶ್ವಕಪ್‌ ಆಗಸ್ಟ್‌ 4ರಿಂದ 27ರ ವರೆಗೆ ಇಂಗ್ಲಂಡ್‌ನ‌ಲ್ಲಿ ನಡೆಯಲಿದೆ.

2018ರ ವನಿತಾ ಟಿ-20 ವಿಶ್ವಕಪ್‌ ವೆಸ್ಟ್‌ ಇಂಡೀಸ್‌ನಲ್ಲಿ ನವೆಂಬರ್‌ 2ರಿಂದ 25ರ ವರೆಗೆ ನಡೆಯಲಿದೆ.

ಐಸಿಸಿ ಪ್ರಧಾನ ಕಾರ್ಯಾಲಯದಲ್ಲಿ ಎನ್‌ ಶ್ರೀನಿವಾಸನ್‌ ನೇತೃತ್ವದಲ್ಲಿ ಮುಸ್ತಫಾ ಕಮಾಲ್‌ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ವೇಳೆ ಕ್ರಿಕೆಟ್‌ ಜಗತ್ತಿಗೆ ಕೆಲವೊಂದು ನಿರ್ದೇಶನಗಳನ್ನೂ ನೀಡಿತು. ಮಂಡಳಿಯು 2019ರ ವರೆಗಿನ ಕ್ರಿಕೆಟ್‌ ಟೂರ್ನಿಗಳ ವೇಳಾ ಪಟ್ಟಿಗೆ ಅನುಮೋದನೆ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited