ನವದೆಹಲಿ : ದೆಹಲಿಯ 8ನೇ ಮುಖ್ಯಮಂತ್ರಿಯಾಗಿ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ಈ ಕುರಿತು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ದೆಹಲಿಯ ಮೊದಲ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ಅವರು ತಮ್ಮ ಬಳಿ ಯಾವುದೇ ಖಾತೆಗಳನ್ನು ಇಟ್ಟುಕೊಳ್ಳದೇ ಎಲ್ಲಾ ಖಾತೆಗಳನ್ನು ಸಂಪುಟ ಸಹೋದ್ಯೋಗಿಗಳಿಗೆ ಹಂಚಿಕೆ ಮಾಡಿದ್ದು, ಅವರು ಎಲ್ಲಾ ಸಚಿವರ ಖಾತೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕೇಜ್ರಿವಾಲ್ ಅವರೊಂದಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 6 ಸಚಿವರು 40 ವರ್ಷದೊಳಗಿನವರಾದ್ದು, ದೇಶದ ಯುವ ಸಂಪುಟ ಎಂದು ಕರೆಯಿಸಿಕೊಳ್ಳುವ ಸಾಧ್ಯತೆ ಇದೆ.
ಕೇಜ್ರಿವಾಲ್ ಸರ್ಕಾರದ ಖಾತೆ ವಿವರ
* ಅರವಿಂದ್ ಕೇಜ್ರಿವಾಲ್ - ಮುಖ್ಯಮಂತ್ರಿ
* ಮನಿಶ್ ಸಿಸೋಡಿಯಾ- ಉಪ ಮುಖ್ಯಮಂತ್ರಿ, ಹಣಕಾಸು, ನಗರಾಭಿವೃದ್ಧಿ, ಶಿಕ್ಷಣ ಮತ್ತು ಗುಪ್ತಚರ
* ಜಿತೇಂದ್ರ ಸಿಂಗ್ ತೊಮರ್ - ಗೃಹ ಮತ್ತು ಕಾನೂನು, ಕಲೆ ಮತ್ತು ಸಂಸ್ಕೃತಿ
* ಸಂದೀಪ್ ಕುಮಾರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭಿವೃದ್ಧಿ
* ಸತ್ಯೇಂದ್ರ ಜೈನ್ - ಆರೋಗ್ಯ, ಇಂಧನ, ಲೋಕೋಪಯೋಗಿ, ಕೈಗಾರಿಕೆ
* ಆಸಿಮ್ ಅಹ್ಮದ್ ಖಾನ್ - ಆಹಾರ, ನಾಗರಿಕ ಪೂರೈಕೆ, ಪರಿಸರ ಮತ್ತು ಅರಣ್ಯ
* ಗೋಪಾಲ್ ರೈ - ಸಾರಿಗೆ ಮತ್ತು ಕಾರ್ಮಿಕ, ಉದ್ಯೋಗ ಖಾತೆ