ನವದೆಹಲಿ : ಕಳೆದ ಆಗಸ್ಟ್ನಿಂದ 10 ಬಾರಿ ಇಳಿಕೆಯಾಗಿರುವ ಪೆಟ್ರೋಲ್ ಹಾಗೂ ಅಕ್ಟೋಬರ್ ನಿಂದ ಆರು ಬಾರಿ ಅಗ್ಗವಾಗಿರುವ ಡೀಸೆಲ್ ಬೆಲೆಗಳು ಏರಿಕೆ ಕಂಡಿವೆ.
ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲೀಟರ್ ಪೆಟ್ರೋಲ್ 82 ಪೈಸೆ ಹಾಗೂ ಲೀಟರ್ ಡೀಸೆಲ್ ಬೆಲೆ 61 ಪೈಸೆಯಷ್ಟು ಹೆಚ್ಚಾಗಿದೆ.
ಸ್ಥಳೀಯ ತೆರಿಗೆಗಳು ಸೇರಿ ಸುಮಾರು 1 ರೂ.ನಷ್ಟು ತೈಲ ಬೆಲೆ 1 ರೂ.ನಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದ್ದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಅಲ್ಪ ಕುಸಿತ ಕಂಡ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಆದಾಗ್ಯೂ ಪೆಟ್ರೋಲ್ ಬೆಲೆ 2010ರ ಸೆಪ್ಟೆಂಬರ್ ಹಾಗೂ ಡೀಸೆಲ್ ದರ 2013ರ ಮಾರ್ಚ್ನಲ್ಲಿ ಇದ್ದಷ್ಟೇ ಇದೆ. ಫೆ.4ರಂದು ಪೆಟ್ರೋಲ್ 2.42 ರೂ. ಹಾಗೂ ಡೀಸೆಲ್ 2.25 ರೂ.ನಷ್ಟು ಇಳಿಕೆಯಾಗಿತ್ತು.