Untitled Document
Sign Up | Login    
Dynamic website and Portals
  
March 7, 2015

ಐಸಿಸ್ ಅಟ್ಟಹಾಸ: ಇರಾಕ್ ನ ಐತಿಹಾಸಿಕ ನಗರ ನಾಮಾವಶೇಷ

ಬಾಗ್ದಾದ್ : ಐಸಿಸ್, ಯುದ್ಧಗ್ರಸ್ತ ಇರಾಕ್ ನ ಪ್ರಮುಖ ನಗರವಾಗಿರುವ ಮಾಸೂಲ್‍ನ ದಕ್ಷಿಣ ಭಾಗದಲ್ಲಿರುವ ನಿಮೃದ್ ಅನ್ನು ಅದು ನಾಮಾವಶೇಷ ಮಾಡಿದೆ.

ವಿಶ್ವದ ಪ್ರಾಚೀನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಸ್ಥಳವನ್ನು ಬಾಂಬ್ ಮತ್ತು ಯುದ್ಧ ಟ್ಯಾಂಕ್ ಗಳಿಂದ ನಾಮಾವಶೇಷಗೊಳಿಸಿದೆ. ಅಲ್ಲಿದ್ದ ಅತ್ಯಮೂಲ್ಯ ಕಲಾಕೃತಿಗಳನ್ನು ಉಗ್ರರು ಹೊತ್ತೊಯ್ದಿದ್ದಾರೆ. ಇರಾಕ್ ನ ಪ್ರವಾಸೋದ್ಯಮ ಇಲಾಖೆ ಇದನ್ನು ಖಚಿತಪಡಿಸಿದೆ.

ಯುನೆಸ್ಕೋ ಪಟ್ಟಿಯಲ್ಲಿರುವ ಈ ತಾಣವನ್ನು ತಾನು ಗುರಿಯಾಗಿಸಿರುವ ಬಗ್ಗೆ ಐಸಿಸ್ ಸಂಘಟನೆ ಜಾಲತಾಣಗಳಲ್ಲಿ ವೀಡಿಯೋ ಫೋಸ್ಟ್ ಮಾಡಿತ್ತು. ಗುರುವಾರ ಮಧ್ಯಾಹ್ನದ ಪ್ರಾರ್ಥನೆ ಮುಕ್ತಾಯವಾಗುತ್ತಿದ್ದಂತೆ ನೂರಾರು ಸಂಖ್ಯೆಯ ಉಗ್ರರು ಈ ಕೃತ್ಯಕ್ಕಿಳಿದರು.
ಇರಾಕ್ ನಗರದ ಮಾಸೂಲ್ ನಗರದ ಸಮೀಪವಿರುವ ಬುಡಕಟ್ಟು ಜನಾಂಗದವರು ಈ ದಾಳಿಗೆ ಪ್ರತ್ಯಕ್ಷ ಸಾಕ್ಷಿ. ಅವರೇ ಹೇಳುವಂತೆ ಟ್ಯಾಂಕರ್ ಗಳು, ಬಾಂಬ್‍ಗಳ ಮೂಲಕ ಉಗ್ರರು ದಾಳಿ ನಡೆಸಿದರು. ನೋಡ ನೋಡುತ್ತಿದ್ದಂತೆ ಅಮೂಲ್ಯ ಕಲಾಕೃತಿಗಳು ನಾಶವಾಯಿತು.

2001ರಲ್ಲಿ ತಾಲಿಬಾನ್ ಉಗ್ರರು ಬಾಮಿಯಾನ್ ಬುದ್ಧನ ವಿಗ್ರಹಗಳನ್ನು ನೆಲಸಮಗೊಳಿಸಿದ್ದರು. ಅದೇ ಮಾದರಿಯಲ್ಲೇ ಐಸಿಸ್ ಕಟುಕರು ಅನುಸರಿಸಿದ್ದಾರೆ. ಯುನೆಸ್ಕೋ ಮಹಾ ನಿರ್ದೇಶಕ ಇರಿನಾವಾ ಬೊಕೊವಾ, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿಮೂನ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಪ್ರಮುಖರು ಭಯೋತ್ಪಾದಕರ ಕುಕೃತ್ಯವನ್ನು ಖಂಡಿಸಿದ್ದಾರೆ.

ಐಸಿಸ್ ಪರವಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಟ್ವೀಟರಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಈ ಮೂಲಕ ಅವರು ಜಿಹಾದಿವಾದ ಜನಪ್ರಿಯಗೊಳಿಸುತ್ತಿದ್ದಾರೆ. 2014 ರಲ್ಲಿ 46 ಸಾವಿರ ಟ್ವಿಟರ್ ಅಕೌಂಟ್‍ಗಳನ್ನು ಐಎಸ್‍ಐಎಸ್ ಸಮೀಕ್ಷೆಯಲ್ಲಿ ಪತ್ತೆಯಾಗಿದೆ, ಎಲ್ಲ ಅಕೌಂಟ್‍ಗಳಿಗೆ 90 ಸಾವಿರ ಅನುಯಾಯಿಗಳಿದ್ದಾರೆ ಎಂದು ಎನ್ ಇಟಿ ತಂತ್ರಜ್ಞ ಜೆ.ಎಂ. ಬರ್ಗರ್ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited