ಪಣಜಿ : ಗೋವಾದ ನೈರುತ್ಯ ಭಾಗಕ್ಕೆ 25 ನಾಟಿಕಲ್ ಮೈಲಿಗಳ ದೂರದಲ್ಲಿ ಭಾರತೀಯ ನೌಕಾದಳದ ಪರೀವೀಕ್ಷಣಾ ವಿಮಾನವೊಂದು ಪತನವಾಗಿರುವ ಹಿನ್ನಲೆಯಲ್ಲಿ, ವಿಮಾನದಲ್ಲಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ.
ಕಡಲತಡಿಯ ಡಾರ್ನಿಯರ್ ಪರಿವೀಕ್ಷಣಾ ವಿಮಾನ ದಿನನಿತ್ಯದಂತೆ ತರಬೇತು ಹಾರಾಟದಲ್ಲಿರಬೇಕಾದರೆ ರಾತ್ರಿ ಸುಮಾರು 11 ಘಂಟೆಗೆ ಪತನವಾಗಿ, ವಿಮಾನದಲ್ಲಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ನೌಕಾ ಮೂಲಗಳು ತಿಳಿಸಿವೆ.
ವಿಮಾನ ಪತನವಾದ ಹಿನ್ನಲೆಯಲ್ಲಿ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ. ಬದುಕುಳಿದ ಒಬ್ಬರನ್ನು ರಕ್ಷಿಸಲಾಗಿದೆ. ವಿಮಾದಲ್ಲಿದ್ದ ಪೈಲಟ್ ಮತ್ತು ಮತ್ತೊಬ್ಬರ ರಕ್ಷಣೆಗೆ ಶೋಧ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.