ಪ್ಯಾರಿಸ್ : 'ದಕ್ಷಿಣ ಫ್ರಾನ್ಸ್' ಲ್ಲಿ ಪತನಕ್ಕೊಳಗಾದ ಜರ್ಮನಿಯ A320 ಡಿ AIRX ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಇದರಿಂದಾಗಿ ವಿಮಾನ ಪತನಕ್ಕೊಳಗಾದ ಕಾರಣ ತಿಳಿಯಲು ಸಹಾಯವಾಗಲಿದೆ.
ಕಳೆದ 25 ವರ್ಷಗಳಿಂದ ಬಳಕೆಯಾಗುತ್ತಿದ್ದ ಈ ವಿಮಾನ ನಿಯಂತ್ರಣ ಕಳೆದುಕೊಳ್ಳತ್ತಲೇ ಪೈಲಟ್, ಸಹಾಯಕ್ಕಾಗಿ ಕರೆ ಮಾಡಿದ್ದರ ಬಗ್ಗೆ ಮಾಹಿತಿ ದೊರೆತಿದೆ. ದುರಂತ ಸಂಭವಿಸುವ ವೇಳೆಯಲ್ಲಿ 31 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಹೇಳಲಾಗಿದೆ.
ಮಾ.24ರಂದು ಸಂಜೆ ನಡೆದ ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 148 ಮಂದಿ ಪ್ರಯಾಣಿಕರೂ ಸಾವನ್ನಪ್ಪಿದ್ದರು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಿಂದ 700 ಕಿಮೀ ದೂರದ ಆಲ್ಫ್ ಪರ್ವತ ಶ್ರೇಣಿಯಲ್ಲಿ A320 ಡಿ AIRX ವಿಮಾನ ಪತನಗೊಂಡಿತ್ತು.
ಅಪಘಾತಕ್ಕೊಳಗಾಗಿರುವ A320 ಡಿ AIRX ವಿಮಾನ, ಸ್ಥಳೀಯ ಕಾಲಮಾನದ ಪ್ರಕಾರ 10:47ಕ್ಕೆ ಡಿಸ್ಟ್ರೆಸ್ ಸಿಗ್ನಲ್ ಕಳಿಸಿತ್ತು.