ನವದೆಹಲಿ : ಉಗ್ರರ ವಿರುದ್ಧದ ಕಾರ್ಯಾಚರಣೆಗೆಂದು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿಕೊಂಡ ಡ್ರೋನ್ (ಮಾನವ ರಹಿತ ಲಘು ವಿಮಾನ)ಗಳನ್ನು ಪಾಕಿಸ್ತಾನ ಸೇನೆ, ಭಾರತದ ವಿರುದ್ಧ ಗೂಢಚರ್ಯೆ ನಡೆಸಲು ಬಳಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳಿಂದ ರಾಜಸ್ಥಾನದ ಗಡಿಭಾಗಗಳಾದ ಜೈಸಲ್ಮೇರ್, ಗಂಗಾನಗರ್ ಮತ್ತು ಬಿಕಾನೇರ್ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 300 ಮೀಟರ್ ದೂರದಲ್ಲಿ ಪಾಕ್ ನ ಡ್ರೋನ್ ಗಳ ಹಾರಾಟವನ್ನು ಬಿ.ಎಸ್.ಎಫ್ ಯೋಧರು ಗುರುತಿಸಿದ್ದಾರೆ.
ಭಾರತದ ಗಡಿಯೊಳಗೆ ಸೇನಾ ಜಮಾವಣೆ, ಬಂಕರ್ ನಿರ್ಮಾಣ ಸೇರಿದಂತೆ ಇತರೆ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಪಾಕ್ ಸೇನೆ, ಈ ಡ್ರೋನ್ ಗಳನ್ನು ಹಾರಿಬಿಟ್ಟಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಸೇನೆ ಬುರ್ರಕ್ ಮತ್ತು ಬರ್ಕ್ ಎಂಬ ಎರಡು ಸ್ವದೇಶಿ ನಿರ್ಮಿತ ಡ್ರೋನ್ ಗಳನ್ನು ಬಿಡುಗಡೆ ಮಾಡಿತ್ತು.