ಮುಂಬೈ : ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಇಸ್ಲಾಮಿಕ್ ಉಗ್ರ ಸಂಘಟನೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ ಬಂದಿದೆ.
ಡಿ.ಎನ್.ಎ ಪತ್ರಿಕೆ ವರದಿ ಪ್ರಕಾರ 583847@gmail.com ಎಂಬ ಇ-ಮೇಲ್ ಐಡಿ ಮೂಲಕ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ರಘುರಾಮ್ ರಾಜನ್ ಅವರನ್ನು ಕೊಲ್ಲುವುದಕ್ಕಾಗಿ ತಮಗೆ ಸುಪಾರಿ ನೀಡಲಾಗಿದ್ದು, ಕೊಲ್ಲುವುದಕ್ಕೆ ನೀಡಲಾಗಿರುವ ಹಣಕ್ಕಿಂತಲೂ ಹೆಚ್ಚು ಹಣ ನೀಡಿದರೆ ಸುಪಾರಿಯನ್ನು ಕೈಬಿಡುವ ಯೋಚನೆ ಮಾಡಲಾಗುತ್ತದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಬಂದಿರುವ ಇ-ಮೇಲ್ ಐಡಿ ಐ.ಎಸ್.ಐ.ಎಸ್ ಗೆ ಸೇರಿದ್ದಾಗಿದ್ದು, ಇ-ಮೇಲ್ ಐಡಿಯನ್ನು ಯು.ಎಸ್ ಕೆನಡಾ, ನೈಜೀರಿಯಾ, ಪೋಲ್ಯಾಂಡ್, ಬೆಲಿಜಿಯಂ, ಜರ್ಮನಿ ಸೇರಿದಂತೆ ಸುಮಾರು 10 ದೇಶಗಳಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಬೆದರಿಕೆ ಇ-ಮೇಲ್ ಬಂದ ಕೂಡಲೇ ಎಚ್ಚೆತ್ತುಕೊಂಡ ಆರ್.ಬಿ.ಐ ನ ಅಧಿಕಾರಿಗಳು ಮುಂಬೈ ನ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಹಾಕಿರುವ ಇ-ಮೇಲ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಿಸಿಐಸಿ ಯು.ಎಸ್ ಗೆ ಮನವಿ ಮಾಡಿದೆ.
583847@gmail.com ಇ-ಮೇಲ್ ಐಡಿ ಲಾಗಿನ್ ಮಾಹಿತಿಯನ್ನು ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.