Untitled Document
Sign Up | Login    
Dynamic website and Portals
  
June 2, 2015

ಆರ್.ಬಿ.ಐನಿಂದ ರೆಪೋ ದರ ಕಡಿತ: ಇಎಂಐ ಕೂಡ ಇಳಿಕೆ ಸಾಧ್ಯತೆ

ರಘುರಾಮ್ ರಾಜನ್ ರಘುರಾಮ್ ರಾಜನ್

ಮುಂಬೈ : ಭಾರತೀಯ ರಿಸರ್ವ ಬ್ಯಾಂಕ್‌ ರೆಪೋ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಗೃಹ ಸಾಲ,ವಾಹನ ಸಾಲ ಮತ್ತು ಇನ್ನಿತರಸಾಲದ ಬಡ್ಡಿದರ ಇಳಿಕೆಯಾಗಿ, ಮರು ಪಾವತಿ ಕಂತು (ಇಎಂಐ) ಹೊರೆ ಕಡಿಮೆಯಾಗುವ ಸಾಧ್ಯತೆಗಳಿದ್ದು, ಜತೆಗೆ ಆರ್ಥಿಕತೆಗೂ ಉತ್ತೇಜನ ಸಿಗಲಿದೆ.

ಆರ್.ಬಿ.ಐ ಗವರ್ನರ್ ರಘುರಾಮ್‌ ರಾಜನ್‌ ಅವರು ಪ್ರಸಕ್ತ ಸಾಲಿನ 2 ನೇ ದ್ವೈಮಾಸಿಕ ಆರ್ಥಿಕ ನೀತಿಯನ್ನು ಪ್ರಕಟಿಸಿದ್ದು, ತಕ್ಷಣಕ್ಕೆ ಜಾರಿಯಾಗುವಂತೆ ರೆಪೋ ದರವನ್ನು 7.5 ಪ್ರತಿಶತದಿಂದ 7.25 ಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅರ್ಥ ವ್ಯವಸ್ಥೆ ಚೇತರಿಸಿಕೊಂಡಿದ್ದು, ಹೂಡಿಕೆಗೆ ಉತ್ತೇಜನ ನೀಡಲು ಬಡ್ಡಿ ದರ ತಗ್ಗಿಸಲಾಗಿದೆ. ಬ್ಯಾಂಕುಗಳು ಈ ಲಾಭವನ್ನು ಶೀಘ್ರದಲ್ಲೇ ಗ್ರಾಹಕರಿಗೆ ವರ್ಗಾಯಿಸುವ ವಿಶ್ವಾಸ ಇದೆ ಎಂದು ಗವರ್ನರ್ ರಘುರಾಂ ರಾಜನ್‌ ಹೆಳಿದ್ದಾರೆ.

ಆದರೆ, ಶೇ 4ರಷ್ಟಿದ್ದ ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್‌) ಮತ್ತು ಶೇ 21.5ರಷ್ಟಿದ್ದ ಶಾಸನಬದ್ಧ ನಗದು ಅನುಪಾತದಲ್ಲಿ (ಎಸ್‌.ಎಲ್‌.ಆರ್‌) ಆರ್‌.ಬಿ.ಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.

ರೆಪೋ ದರ ತಗ್ಗಿರುವುದರಿಂದ ಗೃಹ, ವಾಣಿಜ್ಯ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆಯಾಗಲಿವೆ. ಈಗಾಗಲೇ ಬ್ಯಾಂಕುಗಳಿಂದ ಸಾಲ ಪಡೆದು ಮರು ಪಾವತಿ ಮಾಡುತ್ತಿರುವವರ ಸಮಾನ ಮಾಸಿಕ ಕಂತು (ಇಎಂಐ) ಕೂಡ ಇಳಿಯಲಿದೆ. ಶೀಘ್ರದಲ್ಲೇ ಬ್ಯಾಂಕುಗಳು ಪರಿಷ್ಕೃತ ಬಡ್ಡಿ ದರ ಪ್ರಕಟಿಸುವ ಸಾಧ್ಯತೆ ಇದೆ.

ರೆಪೋ ದರ ತಗ್ಗಿರುವುದರಿಂದ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಲಿದ್ದು, ತಯಾರಿಕಾ ವಲಯಕ್ಕೆ ಗರಿಷ್ಠ ಮಟ್ಟದಲ್ಲಿ ಉತ್ತೇಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಉದ್ಯಮ ವಲಯ ಕೂಡ ಆರ್‌.ಬಿ.ಐ ನೀತಿಯನ್ನು ಸ್ವಾಗತಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited