Untitled Document
Sign Up | Login    
Dynamic website and Portals
  
June 12, 2015

ಮ್ಯಾಗಿ ನಿಷೇಧ ತಡೆ ತೆರವಿಗೆ ಬಾಂಬೆ ಹೈಕೋರ್ಟ್ ನಕಾರ

ಮುಂಬೈ : ಮ್ಯಾಗಿ ನ್ಯೂಡಲ್ಸ್ ಉತ್ಪನ್ನಗಳ ನಿಷೇಧಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ನೆಸ್ಲೆ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ತಕ್ಷಣದಲ್ಲಿ ನಿಷೇಧ ವಾಪಸ್ ಪಡೆಯಲು ಸಾಧ್ಯವಿಲ್ಲ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರಿಂದಾಗಿ ನೆಸ್ಲೆಗೆ ಮತ್ತಷ್ಟು ಹಿನ್ನಡೆ ಉಂಟಾದಂತಾಗಿದೆ. ಮ್ಯಾಗಿ ನ್ಯೂಡಲ್ಸ್ ನಲ್ಲಿ ಅಪಾಯಕಾರಿ ಅಂಶಗಳಿವೆ ಎಂದು ನಿಷೇಧ ಹೇರಿರುವ ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ)ದ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೇ ನಿಷೇಧವನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿತ್ತು.

ಮ್ಯಾಗಿ ಸೇರಿದಂತೆ ತನ್ನ 9 ಉತ್ಪನ್ನಗಳನ್ನು ನಿಯಮಗಳನ್ನು ಸರಿಯಾಗಿ ಪಾಲಿಸದೇ ಏಕಪಕ್ಷೀಯವಾಗಿ ನಿಷೇಧಿಸಲಾಗಿದೆ ಎಂದು ಆರೋಪಿಸಿ ನೆಸ್ಲೆ ಕಂಪನಿ ಮನವಿಯಲ್ಲಿ ತಿಳಿಸಿತ್ತು. ಆರೋಗ್ಯಕ್ಕೆ ಹಾನಿಕಾರವಾಗಿದೆ ಎಂದು ಆರೋಪಿಸಿ ಆಹಾರ ಸುರಕ್ಷತಾ ಇಲಾಖೆ ತನ್ನ ಉತ್ಪನ್ನಗಳನ್ನು ನಿಷೇಧಿಸಿದೆ. ಆದರೆ ಆದೇಶ ನೀಡುವಾಗ ಆಹಾರ ಸುರಕ್ಷತಾ ಕಾಯ್ದೆಯ 34ನೇ ಪರಿಚ್ಚೇದವನ್ನು ಪಾಲನೆ ಮಾಡದೇ ಸಹಜ ನ್ಯಾಯ ತಿರಸ್ಕರಿಸಲಾಗಿದೆ. ಅಲ್ಲದೇ ಉತ್ಪನ್ನಗಳ ಪರೀಕ್ಷೆಯೂ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂದು ನೆಸ್ಲೆ ದೂರಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited