Untitled Document
Sign Up | Login    
Dynamic website and Portals
  
June 14, 2015

ನೆರೆ ದೇಶದ ನಿರಾಶ್ರಿತ ಹಿಂದೂ, ಸಿಖ್ ರಿಗೆ ಕೇಂದ್ರದಿಂದ ನಾಗರಿಕತ್ವ

ನವದೆಹಲಿ : ನೆರೆ ದೇಶದ ನಿರಾಶ್ರಿತರಿಗೆ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನದ ಸುಮಾರು 4,300 ನಿರಾಶ್ರಿತ ಹಿಂದೂ ಹಾಗೂ ಸಿಖ್ ನಾಗರಿಕರಿಗೆ ಆಡಳಿತಾರೂಢ ಎನ್.ಡಿ.ಎ ಸರ್ಕಾರ ಭಾರತದ ನಾಗರಿಕತ್ವ ನೀಡಿದೆ.

ಈ ನಿರಾಶ್ರಿತರಿಗೆ ಪ್ರಾಥಮಿಕವಾಗಿ ದೇಶದ ನಾಗರಿಕತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದು, ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಭಾರತ ಆಶ್ರಯ ನೀಡಲಿದೆ ಎಂಬ ಬಿಜೆಪಿ ನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಿ, ಬಾಂಗ್ಲಾದೇಶದ ನಿರಾಶ್ರಿತ ಹಿಂದುಗಳನ್ನು ಇತರೆ ಭಾರತೀಯ ಪ್ರಜೆಯಂತೆಯೇ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದರು. ಪಾಕಿಸ್ತಾನ್,

ಯುಪಿಎ-II ಅವಧಿಯಲ್ಲಿ 1023 ಮಂದಿಗೆ ಮಾತ್ರ ನಾಗರಿಕತ್ವ ನೀಡಿತ್ತು. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಸುಮಾರು 2 ಲಕ್ಷ ಹಿಂದು, ಸಿಖ್ ನಿರಾಶ್ರಿತರು ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited