ಅಥೆನ್ಸ್ : ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಗ್ರೀಸ್ ನ ಪ್ರಭಾವ ಇತರ ದೇಶಗಳ ಮೇಲೂ ಬೀರತೊಡಗಿವೆ.
ವಿದೇಶಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಆ ಸಂಸ್ಥೆಗಳು ಹೇರುವ ಕಠಿಣ ಷರತ್ತಿಗೆ ಒಪ್ಪಿಕೊಳ್ಳದೇ ಇರುವ ನಿರ್ಧಾರವನ್ನು ಗ್ರೀಸ್ ಜನತೆ ಕೈಗೊಂಡಿರುವ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯ ಮೇಲಾಗಿದೆ.
ಈ ಪರಿಣಾಮ ಸೋಮವಾರದ ವಹಿವಾಟು ಪ್ರಾರಂಭದಲ್ಲೇ ಮುಂಬೈ ಸೆನ್ಸೆಕ್ಸ್ 3೦೦ ಸೂಚ್ಯಂಕ ಇಳಿಕೆ ಕಂಡಿದೆ.
ಭಾನುವಾರ ನಡೆದ ನಿರ್ಣಾಯಕ ಜನಮತದಲ್ಲಿ ಗ್ರೀಸ್ ಜನತೆ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಆ ಸಂಸ್ಥೆಗಳು ಹೇರುವ ಕಠಿಣ ಷರತ್ತಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಇದರ ಪರಿಣಾಮ ವಿಶ್ವದ ವಿವಿಧ ಷೇರುಪೇಟೆಗಳ ಮೇಲೆ ಕರಾಳ ಛಾಯೆ ಮೂಡಿಸಿದೆ.
ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಸಾಲ ನೀಡಿರುವ ವಿವಿಧ ಸಂಸ್ಥೆಗಳು ಹೇರುವ ಷರತ್ತಿಗೆ ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಒಪ್ಪಿಗೆ ಸೂಚಿಸಿರಲಿಲ್ಲ. ಆದ್ದರಿಂದ ಜನತೆಯ ಅಭಿಪ್ರಾಯ ಕೇಳಲು ಭಾನುವಾರ ಮತದಾನ ನಡೆಸಿದ್ದರು. ಜನರೂ ಸಹ ಇದಕ್ಕೆ ಒಪ್ಪಿಗೆ ಸೂಚಿಸದೇ ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಈ ಮೂಲಕ ಸಾಲ ಮರುಪಾವತಿ ಸಂಬಂಧ ಗ್ರೀಸ್ ಗೆ ವಿದೇಶಿ ಹಣಕಾಸು ಸಂಸ್ಥೆಗಳೊಂದಿಗೆ ಜೌಕಾಸಿ ನಡೆಸುವ ಅವಕಾಶ ಲಭ್ಯವಾಗಬಹುದು.