ಮುಂಬೈ : ಹದಗೆಟ್ಟಿರುವ ಗ್ರೀಸ್ ಆರ್ಥಿಕ ಸ್ಥಿತಿ ಇತರ ದೇಶಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಚೀನಾದ ಪ್ರತಿಷ್ಠಿತ ಶಾಂಘೈ ಶೇರು ಮಾರುಕಟ್ಟೆ 7% ಕುಸಿದಿದ್ದು, ಭಾರತದಲ್ಲೂ ಇದರ ವ್ಯತಿರಿಕ್ತ ಪರಿಣಾಮ ಕಂದುಬರುತ್ತಿದೆ.
ಗ್ರೀಸ್ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ ಸೆನ್ಸೆಕ್ಸ್ 500 ಸೂಚ್ಯಾಂಕ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 150 ಸೂಚ್ಯಾಂಕ ಕುಸಿತ ಕಂಡಿದೆ.
ದಿನದ ಪ್ರಾರಂಭದಲ್ಲಿ ಸೆನ್ಸೆಕ್ಸ್ 500 ಸೂಚ್ಯಾಂಕ ನಷ್ಟಕ್ಕೆ ಗುರಿಯಾಗಿ 28,000 ಸೂಚ್ಯಾಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿಯಿತು. ಇದೇ ವೇಳೆ ನಿಫ್ಟಿ ಕೂಡ 150 ಸೂಚ್ಯಾಂಕ ನಷ್ಟಕ್ಕೆ ಗುರಿಯಾಗಿ 8,500 ಸೂಚ್ಯಾಂಕಗಳಿಗಿಂತ ಕೆಳಗಿನ ಮಟ್ಟಕ್ಕೆ ಜಾರಿತು.
ಶಾಂಘಾಯ್ ಶೇರು ಮಾರುಕಟ್ಟೆ ಶೇ.7ರಷ್ಟು ಕುಸಿದ ಪರಿಣಾಮವಾಗಿ ಏಷ್ಯಾದ ಇತರ ಶೇರು ಮಾರುಕಟ್ಟೆಗಳು ಕೂಡ ಕುಸಿತ ಕಂಡವು. ಹಾಂಕಾಂಗ್ನ ಹ್ಯಾಂಗ್ಸೆಂಗ್ ಸೂಚ್ಯಂಕ ಶೇ.4.45 ಕುಸಿದರೆ ಜಪಾನಿನ ನಿಕ್ಕೀ ಸೂಚ್ಯಂಕ ಶೇ.1.52 ನಷ್ಟಕ್ಕೆ ಗುರಿಯಾಯಿತು.