ಶಾಂಘೈ : ಶಾಂಘೈಯಲ್ಲಿ ಬ್ರಿಕ್ಸ್ ದೇಶಗಳ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (ಎನ್ಡಿಬಿ) ಗೆ ಮಂಗಳವಾರ ಚಾಲನೆ ನೀಡಲಾಯಿತು. ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ (ಬ್ರಿಕ್ಸ್) ದೇಶಗಳ ಬೆಂಬಲದೊಂದಿಗೆ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಪ್ರಾರಂಭಿಸಲಾಗಿದೆ.
ಅಭಿವೃದ್ದಿ ಹೊಂದುತ್ತಿರುವ ದೇಶಗಳ ಮೂಲಸೌಕರ್ಯ ಯೋಜನೆಗೆ ಎನ್ಡಿಬಿ ಹಣಕಾಸು ನೆರವು ನೀಡಲಿದೆ. ವರ್ಲ್ಡ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಎನ್ಡಿಬಿ ಪರ್ಯಾಯವಾಗಲಿದೆ ಎಂದು ಊಹಿಸಲಾಗಿದೆ.
ಎನ್ಡಿಬಿ ಶಾಂಘೈನಲ್ಲಿ ಬ್ಯಾಂಕ್ನ ಕೇಂದ್ರ ಕಚೇರಿ ಹೊಂದಿದ್ದು, ಕನ್ನಡಿಗ ಕೆ ವಿ ಕಾಮತ್, ಮೊದಲ 5 ವರ್ಷಗಳ ಕಾಲ ಬ್ಯಾಂಕ್ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬ್ಯಾಂಕ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಚೀನಾದ ಹಣಕಾಸು ಸಚಿವ ಲೂ ಜಿವೇ, ಶಾಂಘೈ ಮೇಯರ್ ಯಾಂಗ್ ಕ್ಸಿಯಾಂಗ್, ಬ್ಯಾಂಕ್ನ ಮೊದಲ ಅಧ್ಯಕ್ಷ ಕೆ.ವಿ.ಕಾಮತ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.