Untitled Document
Sign Up | Login    
Dynamic website and Portals
  
August 5, 2015

ಇಸ್ರೋದಿಂದ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳ ಉಡಾವಣೆ

ಬೆಂಗಳೂರು : ಇಸ್ರೋ ಇದೇ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳನ್ನು 2015-16 ರ ಅವಧಿಯಲ್ಲಿ ಉಡಾವಣೆ ಮಾಡಲಿದೆ.

ಇಸ್ರೋದ ವಾಣಿಜ್ಯ ಅಂಗಸಂಸ್ಥೆ ಆಂಟ್ರಿಕ್ಸ್ ಕಾಪೋರೇಷನ್ 2015-16 ನೇ ಸಾಲಿನಲ್ಲಿ ಅಮೆರಿಕದ 9 ನ್ಯಾನೋ ಉಪಗ್ರಹಗಳ ಉಡಾವಣೆಯ ಗುತ್ತಿಗೆಯನ್ನು ಪಡೆದುಕೊಂಡಿರುವುದಾಗಿ ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ.

ಪಿಎಸ್​ಎಲ್​ವಿ ಉಡಾಹಕವನ್ನು ಬಳಸಿಕೊಂಡು ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದೆಂದು ಅವರು ಹೇಳಿದ್ದಾರೆ. ಈವರೆಗೆ ಇಸ್ರೋ ತನ್ನ ವಿವಿಧ ಉಡಾಹಕಗಳನ್ನು ಬಳಸಿಕೊಂಡು ಸುಮಾರು 19 ರಾಷ್ಟ್ರಗಳ 45 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಪುನರ್ಬಳಕೆ ಮಾಡಬಹುದಾದ ಉಡಾಹಕಗಳ ಪ್ರಾಯೋಗಿಕ ಹಾರಾಟ ಈ ವರ್ಷದ ಕೊನೆಯ ಭಾಗದಲ್ಲಿ ನಡೆಸಲಾಗುವುದೆಂದು ತಿರುವನಂತಪುರದ ವಿಕ್ರಮ್​ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಕೆ. ಶಿವನ್ ತಿಳಿಸಿದ್ದಾರೆ. ಉಪಗ್ರಹವನ್ನು ನಿಗದಿತ ಕಕ್ಷೆಗೆ ಇರಿಸುವ 2 ಹಂತದ, ಸಂಪೂರ್ಣವಾಗಿ ಪುನರ್ಬಳಕೆ ಮಾಡಬಹುದಾದ ಉಡಾಹಕ ಇದಾಗಿರುವುದಾಗಿ ಅವರು ಹೇಳಿದ್ದಾರೆ.

ಜಿಎಸ್​ಎಲ್​ವಿ ಡಿ6 ಉಡಾಹಕದ ಬಗ್ಗೆ ಮಾಹಿತಿ ನೀಡಿದ ಅವರು, ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಾಣಗೊಂಡಿರುವ 2.5 ಟನ್ ತೂಕದ, ಸುಮಾರು ೨೫೦ ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ ಜಿಎಸ್​ಎಲ್​ವಿ ಡಿ6 ಉಡಾಹಕ ಆಗಸ್ಟ್ ತಿಂಗಳ ಕೊನೆಯಲ್ಲಿ ಉಡಾವಣೆಗೊಳ್ಳಲಿದೆ ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited