ಶ್ರೀಹರಿಕೋಟಾ : ಖಗೋಳ ವೀಕ್ಷಣಾಲಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಮೊತ್ತಮೊದಲ ಆಸ್ಟ್ರೋಸ್ಯಾಟ್ ಉಪಗ್ರಹ ಸೋಮವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರಿಂದ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸಿದಂತಾಗಿದೆ.
1513 ಕೆಜಿ ತೂಕದ ಆಸ್ಟ್ರೋಸ್ಯಾಟ್ ಉಪಗ್ರಹವನ್ನು ಪಿ ಎಸ್ ಎಲ್ ವಿ ಸಿ 30 ರಾಕೆಟ್ ಹೊತ್ತೊಯ್ದಿದೆ.
ಈ ಆಸ್ಟ್ರೋಸ್ಯಾಟ್ ಉಪಗ್ರಹದ ಮೂಲಕ ಕಪ್ಪು ರಂಧ್ರ, ನಕ್ಷತ್ರಗಳ ಹುಟ್ಟು ಸಾವಿನ ಬಗ್ಗೆ ಅಧ್ಯಯನ ಮಾಡಲು ಸಹಕಾರಿಯಾಗಲಿದೆ. ಅಲ್ಲದೇ ಆಸ್ಟ್ರೋಸ್ಯಾಟ್ ಉಪಗ್ರಹ ಸುಮಾರು 5 ವರ್ಷಗಳ ಕಾಲ ಕಾರ್ಯಾಚರಿಸಲಿದೆ ಎಂದು ಇಸ್ರೋ ತಿಳಿಸಿದೆ.
ಆಸ್ಟ್ರೋಸ್ಯಾಟ್ ಜೊತೆಗೆ ವಿದೇಶಿ ನಿರ್ಮಿತ ಆರು(ಅಮೆರಿಕದ ನಾಲ್ಕು, ಕೆನಡಾ, ಇಂಡೋನೇಷ್ಯಾದ ತಲಾ ಒಂದು ) ಉಪಗ್ರಹಗಳನ್ನೂ ಪಿಎಲ್ಎಲ್ ವಿ ಸಿ ರಾಕೆಟ್ ಹೊತ್ತೊಯ್ದಿದೆ.