Untitled Document
Sign Up | Login    
Dynamic website and Portals
  
December 28, 2015

ನೆಹರೂ, ಸೋನಿಯಾ ಗಾಂಧಿಯನ್ನು ಟೀಕಿಸಿದ ಕಾಂಗ್ರೆಸ್ ಮುಖವಾಣಿ

ನೆಹರೂ, ಸೋನಿಯಾ ಗಾಂಧಿಯನ್ನು ಟೀಕಿಸಿದ ಕಾಂಗ್ರೆಸ್ ಮುಖವಾಣಿ

ಮುಂಬೈ : ಸೋಮವಾರ ಕಾಂಗ್ರೆಸ್ ಪಕ್ಷ ತನ್ನ 131 ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಲುತ್ತಿರುವ ಸಂದರ್ಭದಲ್ಲಿ ಪಕ್ಷದ ಮುಖವಾಣಿಯಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಟೀಕಿಸುವಂತಹ ಲೇಖನಗಳು ಪ್ರಕಟವಾಗಿದ್ದು, ಪಕ್ಷವನ್ನು ತೀವ್ರ ಮುಜುಗರಕ್ಕೆ ಗುರಿಪಡಿಸಿದೆ.

ಕಾಂಗ್ರೆಸ್‌ ಪಕ್ಷದ ಮುಖವಾಣಿಯಾಗಿರುವ 'ಕಾಂಗ್ರೆಸ್‌ ದರ್ಶನ್‌' ಪತ್ರಿಕೆಯ ಡಿಸೆಂಬರ್‌ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ಲೇಖನವೊಂದರಲ್ಲಿ ಸೋನಿಯಾ ಅವರ ತಂದೆಯನ್ನು ಇಟಲಿಯ ಫ್ಯಾಸಿಸ್ಟ್‌ ಪಡೆಯ ಓರ್ವ ಸದಸ್ಯನೆಂದು ಹೇಳಲಾಗಿದೆ.

ಕಾಂಗ್ರೆಸ್‌ ದರ್ಶನ್‌ ನ ಇದೇ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಇನ್ನೊಂದು ಲೇಖನದಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಕಾಶ್ಮೀರ ಕುರಿತಾಗಿ ಸರ್ದಾರ್‌ ವಲಭಭಾಯಿ ಪಟೇಲ್‌ ಅವರ ಅಭಿಪ್ರಾಯಗಳನ್ನು ಕೇಳಿದ್ದರೆ ಇಂದಿನ ಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.

ಕಾಂಗ್ರೆಸ್‌ ದರ್ಶನ್‌ ಸಂಪಾದಕರಾಗಿರುವ ಹಿರಿಯ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಅವರು ತಾನು ಪಕ್ಷದ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಗಮನಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಂತರ ಕ್ಷಮೆ ಕೇಳಿದ ಸಂಜಯ್‌ ನಿರುಪಮ್‌, ಸಂಪಾದಕೀಯ ತಂಡದ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಈ ನಡುವೆ ಪಕ್ಷದ ಮೂಲಗಳು ಈ ಬಗ್ಗೆ ತನಿಖೆಯನ್ನು ನಡೆಸಲಾಗುವುದಲ್ಲದೆ ವಿವಾದಾತ್ಮಕ ಲೇಖನಗಳನ್ನು ಪ್ರಕಟಿಸಿರುವ ಸಂಪಾದಕೀಯ ತಂಡವು ಶಿಸ್ತುಕ್ರಮ ಎದುರಿಸಬೇಕಾಗುವುದು ಎಂದು ಹೇಳಿವೆ.

 

 

English Summary : In a major embarrassment for the Congress party, which is celebrating its 131st foundation day on Monday, some controversial articles have appeared in its mouthpiece criticizing Sonia Gandhi and questioning the decisions of Jawaharlal Nehru

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited