ನವದೆಹಲಿ : 50,000 ರೂ ಕ್ಕೂ ಅಧಿಕ ನಗದು ವ್ಯವಹಾರಗಳಿಗೆ ಜನವರಿ 1, 2016 ರಿಂದ ಕಡ್ಡಯವಾಗಿ ಪ್ಯಾನ್ ಸಂಖ್ಯೆ ನಮೂದಿಸಬೇಕಾಗುತ್ತದೆ.
ಸ್ಥಿರ ಆಸ್ತಿ ಖರೀದಿ ಅಥವಾ ಮಾರಾಟದ ಮೊತ್ತ 10 ಲಕ್ಷ ರೂ ಗೂ ಅಧಿಕವಿದ್ದರೆ ಮತ್ತು ಹೋಟೆಲ್ ಬಿಲ್ 50,000 ರೂ ಗೂ ಅಧಿಕವಿದ್ದರೂ ಸಹ ಪ್ಯಾನ್ ಸಂಖ್ಯೆ ನಮೂದಿಸಬೆಕು.
ದೇಶೀಯ ಕಪ್ಪುಹಣ ತಡೆಯಲು ಈ ನೀತಿಯನ್ನು ಜಾರಿಗೆ ತರಲಾಗಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಹೊರತಾಗಿ ಉಳಿದ ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಸಂಖ್ಯೆ ಕಡ್ಡಾಯವಾಗಿದೆ.
ಟರ್ಮ್ ಡೆಪೋಸಿಟ್ ನ ಒಂದು ಸಲದ ಡೆಪೋಸಿಟ್ ರೂ 50,000 ಕ್ಕೂ ಅಧಿಕವಿದ್ದರೆ ಅಥವಾ ಒಂದು ವರ್ಷದ ಡೆಪೋಸಿಟ್ 5 ಲಕ್ಷ ರೂ ಇದ್ದರೆ, ಜೀವ ವಿಮಾ ಕಂತುಗಳ ರೂ 50,000 ಕ್ಕೂ ಅಧಿಕವಿದ್ದರೆ ಪ್ಯಾನ್ ಸಂಖ್ಯೆ ನಮೂದಿಸಬೇಕಾಗಿತ್ತದೆ.