Untitled Document
Sign Up | Login    
Dynamic website and Portals
  
January 7, 2016

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸೈಯದ್ ನಿಧನ

Jammu-Kashmir CM Mufti Mohammad Sayeed Passed Away

ಮುಫ್ತಿ ಮೊಹಮ್ಮದ್ ಸೈಯದ್ (ಫೈಲ್ ಚಿತ್ರ) ಮುಫ್ತಿ ಮೊಹಮ್ಮದ್ ಸೈಯದ್ (ಫೈಲ್ ಚಿತ್ರ)

ನವದೆಹಲಿ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ 79 ವರ್ಷ ವಯಸ್ಸಿನ ಮುಫ್ತಿ ಮೊಹಮ್ಮದ್ ಸೈಯದ್ ಗುರುವಾರ ಬೆಳಗ್ಗೆ ನವದೆಹಲಿಎಐಐಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸೆಪ್ಸಿಸ್ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಸೈಯದ್ ಅವರನ್ನು ಕುತ್ತಿಗೆ ನೋವು ಮತ್ತು ಜ್ವರದ ಕಾರಣದಿಂದ ಡಿ. 24 ರಂದು ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರು ಅಂದಿನಿಂದ ಎಐಐಎಂಎಸ್ ನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸೈಯದ್ ಅವರು ಗುರುವಾರ ಬೆಳಗ್ಗೆ 7:30 ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಸಚಿವ ನಯೀಂ ಅಕ್ತರ್ ತಿಳಿಸಿದ್ದಾರೆ.

ಸೈಯದ್ ಅವರು ಪತ್ನಿ, ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ಮೂವರು ಹೆಣ್ಣುಮಕ್ಕಳು ಮತ್ತು ಮಗನನ್ನು ಅಗಲಿದ್ದಾರೆ.

ಮೃತದೇಹವನ್ನು ಶ್ರೀನಗರ ಕೊಂಡೊಯ್ದು, ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ದಕ್ಷಿಣ ಕಾಶ್ಮೀರದ ಅವರ ಪೂರ್ವಜರ ಊರಿನಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುವುದು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಸೈಯದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಸೈಯದ್ ಅವರು ಮಾರ್ಚ್ 1 ರಂದು ಅಧಿಕಾರ ಸ್ವೀಕರಿಸಿದ್ದರು. ಅವರ ಮಗಳಾದ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮುಂದೆ ಮುಖ್ಯಮಂತ್ರಿ ಆಗುವ ನಿರೀಕ್ಷೆ ಇದೆ. ಮೆಹಬೂಬಾ ಮುಫ್ತಿ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯಳು ಎಂದು ಸೈಯದ್ ಅವರು ನ.13ರಂದು ಸೂಚನೆ ನೀಡಿದ್ದರು.

 

 

English Summary : Jammu-Kashmir CM Mufti Mohammad Sayeed Passed Away at AIIMS hospital in New Delhi on Thursday morning.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited