ಮುಂಬೈ : ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 328 ಅಂಕಗಳ ಏರಿಕೆಯನ್ನು ಕಂಡು 26,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್ ಸಂಪಾದಿಸಿದೆ.
ಇಂದಿನ ದಿನಾಂತ್ಯಕ್ಕೆ ಸೆನ್ಸೆಕ್ಸ್ 328.37 ಅಂಕಗಳ ಏರಿಕೆಯನ್ನು ಕಂಡು 26,007 ಅಂಕಗಳ ಮಟ್ಟದಲ್ಲಿ ಸ್ಥಿತವಾಗಿದೆ. ಆ ಮೂಲಕ ಅದು ಕಳೆದ ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದಂತಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 107.60 ಅಂಕಗಳ ಏರಿಕೆಯನ್ನು ದಾಖಲಿಸಿ 7,962.65 ಅಂಕಗಳ ಮಟ್ಟವನ್ನು ತಲುಪಿದೆ.
ಇಂದಿನ ವಹಿವಾಟಿನಲ್ಲಿ ಮಾರುತಿ ಸುಜುಕಿ, ಟಾಟಾ ಸ್ಟೀಲ್, ಲೂಪಿನ್, ಎಕ್ಸಿಸ್ ಬ್ಯಾಂಕ್, ಟಾಟಾಮೋಟರ್, ಸಿಪ್ಲಾ, ಬಿಎಚ್ ಇಎಲ್, ಮಹೀಂದ್ರ, ಐಟಿಸಿ, ಎಚ್ ಡಿಎಫ್ಸಿ, ಎಸ್ ಬಿಐ, ಏಶ್ಯನ್ ಪೇಂಟ್ಸ್, ಇನ್ ಫೋಸಿಸ್ ಮತ್ತು ಲಾರ್ಸನ್ ಉತ್ತಮ ಖರೀದಿಯನ್ನು ಕಂಡವು.