Untitled Document
Sign Up | Login    
Dynamic website and Portals
  
May 9, 2016

ಆಗಸದಲ್ಲಿ ಇನ್ನೊಂದು ವಿಸ್ಮಯ: ಇಂದು ಬುಧ ಗ್ರಹದ ಸಂಚಾರ ವೀಕ್ಷಿಸಬಹುದು

ನವದೆಹಲಿ : ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಸಂಜೆ 4.41ರಿಂದ ಮರ್ಕ್ಯುರಿಯನ್ನು ವೀಕ್ಷಿಸಬಹುದು.

ಈ ಬಾರಿಯ 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ ಸೂರ್ಯನನ್ನು ಹಾದು ಹೋಗುವ ಬುಧ ಗ್ರಹವನ್ನು ಜಪಾನ್ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಹೊರತುಪಡಿಸಿ ಏಷ್ಯಾದ್ಯಂತ ಹೆಚ್ಚಿನ ರಾಷ್ಟ್ರಗಳಲ್ಲಿ ವೀಕ್ಷಿಸಬಹುದು.

ಈ ಭಾರಿ ಬಿಟ್ಟರೆ ಮತ್ತೆ 16 ವರ್ಷ ಅಂದರೆ ನವೆಂಬರ್ 13, 2032ರಲ್ಲಿ ಭಾರತಕ್ಕೆ ಬುಧ ಗ್ರಹದ ದರ್ಶನವಾಗಲಿದೆ. 2019 ನವೆಂಬರ್ 11ರಲ್ಲಿ ಬುಧ ಗ್ರಹ ಸೂರ್ಯನನ್ನು ಹಾದುಹೋಗಲಿದೆ. ಆದರೆ ಭಾರತಕ್ಕೆ ಕಾಣಿಸುವುದಿಲ್ಲ.

ಸುಮಾರು 2 ಗಂಟೆ 45 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿರುವ ಬುಧ ಸೂರ್ಯನಿಗೆ ಮುಖಮಾಡಿ ಸಂಚರಿಸಲಿದೆ. ಸೂರ್ಯ ಮುಳುಗುವ ಸಮಯಕ್ಕೆ ಹೊಂದಿಕೊಂಡಂತೆ ಬುಧ ಗ್ರಹವು ಪೂರ್ವದ ತುದಿಯಲ್ಲಿ, ಅಂದರೆ ಅಂಡಮಾನ್ ಮತ್ತು ನಿಕೋಬಾರ್​ನ ಪೋರ್ಟ್ ಬ್ಲೇರ್​ನತ್ತ ಸುಮಾರು 1 ಗಂಟೆ ಕಾಣಿಸಲಿದೆ. ಸುಮಾರು 2 ಗಂಟೆ 45 ನಿಮಿಷದ ನಂತರ ಸಂಪೂರ್ಣ ಪಶ್ಚಿಮ ದಿಕ್ಕಿಗೆ, ಅಂದರೆ ಗುಜರಾತ್ ​ನ ದ್ವಾರಕದತ್ತ ಸಂಚರಿಸಿರುತ್ತದೆ ಎಂದು ಭೂವಿಜ್ಞಾನ ಸಚಿವಾಲಯ ತಿಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited